Home ಜಿಲ್ಲೆ ಬಿಎಂಆರ್ ಸಿ ಆಸ್ಪತೆಯಿಂದ ಕೈದಿ ಪರಾರಿ

ಬಿಎಂಆರ್ ಸಿ ಆಸ್ಪತೆಯಿಂದ ಕೈದಿ ಪರಾರಿ

(ಸಂಜೆವಾಣಿ ಪ್ರತಿನಿಧಿಯಿಂದ)

‎ಬಳ್ಳಾರಿ, ಏ.24: ನಗರದ ಬಳ್ಳಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ಕೈದಿ ನಿನ್ನೆ ಸಂಜೆ ಪರಾರಿಯಾಗಿರುವ ಘಟನೆ ನಡೆದಿದೆ.

‎‎ಹರಪನಹಳ್ಳಿ ಮೂಲದ ಆರೋಪಿ ಅಣ್ಣಪ್ಪ ನಿನ್ನೆ ಮಧ್ಯಾಹ್ನ ಜೈಲಿನೊಳಗೆ ಮರದ ಮೇಲಿಂದ ಬಿದ್ದು ಗಾಯ ಮಾಡಿಕೊಂಡಿದ್ದನು. ‎ಕೂಡಲೇ ಆತನನ್ನು ಬಳ್ಳಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‎ಚಿಕಿತ್ಸೆ ಪಡೆದು ಬಾತ್ ರೂಂಗೆ ಹೋಗಿದ್ದಾನೆ. ಅಲ್ಲಿ

ಬಾತ್ ರೂಂ ‎ಕಿಟಕಿ ಗ್ಲಾಸ್ ಒಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.