
ಕಲಬುರಗಿ:ಮೇ.12: ಗ್ರಂಥಾಲಯದಲ್ಲಿ ಪುಸ್ತಕಗಳು ಓದಿದರೆ ವ್ಯಕ್ತಿಯ ಭೌತಿಕ ಬೆಳೆವಣಿಗೆಗೆ ಮತ್ತು ವಿಕಸನಕ್ಕೆ ಸಹಕಾರಿಯಾಗಿ ನಿಲ್ಲುತ್ತದೆ ಎಂದು ಹಿರಿಯ ಸಾಹಿತಿ ವೆಂಕಟೇಶ ಜನಾದ್ರಿ ಹೇಳಿದರು.
ನಗರದ ಎನ್‍ಜಿಓ ಕಾಲೋನಿಯಲ್ಲಿರುವ ಹಿರಿಯ ಪತ್ರಕರ್ತ ಸಂಗಮನಾಥ ರೇವತಗಾಂವ ಅವರ ರಶ್ಮಿಸಂಗಮ' ನಿವಾಸದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತಾಶ್ರಯದಲ್ಲಿ ರವಿವಾರ ಏರ್ಪಡಿಸಲಾಗಿದ್ದಮನೆಗೊಂದು ಗ್ರಂಥಾಲಯ’ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮನೆಯಲ್ಲಿರುವ ಗ್ರಂಥಾಲಯದಿಂದ ಮನೆಯ ಪರಿಸರದಲ್ಲಿ ಉತ್ತಮ ಸಂಸ್ಕಾರ ಹೊಂದಲು ಸಾಧ್ಯ. ಈಗಿನ ಮಕ್ಕಳಲ್ಲಿ ಮೊಬೈಲ್ ಗೀಳಿನ ಮಧ್ಯೆ ಪತ್ರಿಕೆಗಳೆ ಓದುವ ವ್ಯವದಾನವಿಲ್ಲ. ಪುಸ್ತಕಗಳಂತು ದೂರ. ಮನೆಯಲ್ಲಿ ಗ್ರಂಥಗಳಿದ್ದಲ್ಲಿ ಕೊನೆಪಕ್ಷ ಪುಟಗಳನ್ನಾದರೂ ತಿರುವಿಹಾಕಬಹುದಾಗಿದೆ. ಗ್ರಂಥಾಲಯಗಳು ವ್ಯವಸ್ಥಿತ ರೂಪದಲ್ಲಿದ್ದಲ್ಲಿ ಓದುಗರಿಗೆ ಜ್ಞಾನದೇಗುಲವಾಗುತ್ತದೆ. ಇತಿಹಾಸದ ಕೃತಿಗಳು ಓದುವುದರಿಂದ ಭಾರತೀಯ ಸಂಸ್ಕøತಿ ಪರಿಚಯಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು. ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಬಿ.ಎಚ್.ನಿರಗುಡಿ ಆಶಯ ನುಡಿಗಳನ್ನಾಡಿ, ಒಂದು ಲಕ್ಷ ಮನೆಗಳಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ಮಾಡಬೇಕೆನ್ನುವುದು ಪ್ರಾಧಿಕಾರ ಅಧ್ಯಕ್ಷ ಮಾನಸ ಮೈಸೂರ ಅವರ ಕನಸಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿಯೂ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದ ಯೋಜನೆಯಾಗಿದೆ. ಉತ್ತಮ ಗ್ರಂಥಾಲಯ ಸಂಗ್ರಹಕ್ಕೆ ಅಭಿನಂದನಾ ಪತ್ರ ನೀಡುವ ಯೋಜನೆ ಪ್ರಾಧಿಕಾರ ಹಾಕಿಕೊಂಡಿದೆ. ಶಾಲಾ-ಕಾಲೇಜುಗಳಲ್ಲಿ ಪ್ರಾಧಿಕಾರದಿಂದ ಅನೇಕ ಯೋಜನೆಗಳು ಹಾಕಿಕೊಂಡಿದ್ದೇವೆ. 10 ಸಾವಿರ ಧನ ಸಹಾಯದೊಂದಿಗೆ ನನ್ನ ನೆಚ್ಚಿನ ಪುಸ್ತಕ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಕಲ್ಯಾಣ ಕರ್ನಾಟಕದ 21 ಯುವ ಸಾಹಿತಿಗಳ ಪುಸ್ತಕಗಳ ಪ್ರಕಟಣೆ ಮಾಡಿ ಬಿಡುಗಡೆ ಮಾಡಿರುವ ಶ್ರೇಯಸ್ಸು ಕಂಡಿದ್ದೇವೆ. ಪ್ರಾಧಿಕಾರದೊಂದಿಗೆ ಸಹಕಾರ ನೀಡುವ ಮೂಲಕ ಪುಸ್ತಕ ಸಂಸ್ಕøತಿಯನ್ನು ಬೆಳೆಸಬೇಕೆಂದು ಅವರು ವಿವರಿಸಿದರು.
ಆರಂಭದಲ್ಲಿ ಕು.ಸಂಪದಾ ಪ್ರಾರ್ಥನೆ ಹಾಡಿದಳು. ಜಿಲ್ಲಾ ಜಾಗೃತ ಸಮಿತಿ ಸದಸ್ಯ ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಶ್ರೀಶೈಲ ಮದಾನೆ ನಿರೂಪಿಸಿದರು. ಡಾ.ನಾಗಪ್ಪ ಗೋಗಿ ವಂದಿಸಿದರು. ರೇವಣಸಿದ್ಧಪ್ಪ ದುಖಾನ, ಡಾ.ಮಹೇಶ ಗಂವ್ಹಾರ, ಹಿರಿಯ ಲೇಖಕ ಸೂರ್ಯಕಾಂತ ಸೊನ್ನದ, ಶಿಕ್ಷಕಿ ರಶ್ಮಿ, ಹಿರಿಯರಾದ ಕೃಷ್ಣ ಕುಲಕರ್ಣಿ, ಶರಣಮ್ಮ ರಾಂಪುರೆ ಮುಂತಾದವರಿದ್ದರು.





















