Home ಜಿಲ್ಲೆ ಪ್ರತಿಭಾ ಪುರಸ್ಕಾರ

ಪ್ರತಿಭಾ ಪುರಸ್ಕಾರ


ನವಲಗುಂದ,ಜೂ.೧೬: ಶೈಕ್ಷಣಿಕ ಸಾಧನೆಯೊಂದಿಗೆ ವಿದ್ಯಾರ್ಥಿಗಳು ಶಿಸ್ತು ಸಂಯಮ ಹಾಗೂ ಕೌಶಲ್ಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳುವಂತೆ ಶ್ರೀ ಜಗದ್ಗುರು ಜಾತ ನಾಗಲಿಂಗಸ್ವಾಮಿ ಮಠದ ಶ್ರೀ ವೀರೇಂದ್ರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕರೆನೀಡಿದರು.


ಸ್ಥಳೀಯ ಶ್ರೀ ಜಗದ್ಗುರು ಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠದಲ್ಲಿ ನಡೆದಲ್ಲಿ ಜರುಗಿದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು
ಉಪನ್ಯಾಸಕಿ ನಿರ್ಮಲ ಬಟ್ಟಲ್ ಮಾತನಾಡಿ ಇಂದು ಮೌಲ್ಯವರ್ದಿತ ಶಿಕ್ಷಣ ಅವಶ್ಯಕ ಎಂದರು. ಇದೆ ವೇಳೆ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ೭೫ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ ೧೨ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.


ಮುಖ್ಯ ಅತಿಥಿಗಳಾಗಿ ಆರ್ ಜಿ ಪಂಡಿತ, ಕಾಳಪ್ಪ ಬಡಿಗೇರ, ವಿ.ಕೆ.ಪೋತದಾರ, ಸುನಿಲ್ ಆರ್ಕಸಾಲಿ ಇದ್ದರು. ಸಂಸ್ಥೆ ಕಾರ್ಯಾಧ್ಯಕ್ಷ ಸಿದ್ದಯ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯೋಪಾಧ್ಯಾಯ ಎಲ್. ಎಚ್. ಕಮ್ಮಾರ ನಿರೂಪಣೆ, ಭೀಮರಾಶಿ ಹೂಗಾರ ವಂದಿಸಿದರು.