
ಕಲಬುರಗಿ,ಜೂ.೧೮-ಹೈದರಾಬಾದ್-ಕರ್ನಾಟಕ ವಿಮೋಚನೆ ದಿನಾಚರಣೆಗೆ ಸಂಬAಧಿಸಿದAತೆ ೧೯೯೮ ರಲ್ಲಿ ಹೊರಡಿಸಿದ ಸರ್ಕಾರದ ಆದೇಶವನ್ನು ತಿದ್ದುಪಡಿಗೊಳಿಸಿ, ಪ್ರಸ್ತುತ ತಿದ್ದುಪಡಿ ಮಾಡಿ, ಐತಿಹಾಸಿಕ ಸತ್ಯಾಂಶಗಳ ಆಧಾರದ ಮೇಲೆ “ಕಲ್ಯಾಣ ಕರ್ನಾಟಕ ಉತ್ಸವ” ಆಚರಣೆ ಮಾಡಲೇ ಬೇಕು ಎಂದು ಅನುಚ್ಚೇದ ೧೭೧(೧) ತಿದ್ದುಪಡಿ ಹೋರಾಟ ಸಮಿತಿಯ ವಿಭಾಗೀಯ ಅಧ್ಯಕ್ಷ ಹಾಗೂ ಕರ್ನಾಟಕ ಯುವಜನ ಫೆಡರೇಷನ್ (ಕೆವೈಎಫ್) ರಾಜ್ಯ ಸಂಚಾಲಕ ಹಾಗೂ ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶದ ಪ್ರಥಮ ಗೃಹಮಂತ್ರಿ ಹಾಗೂ ಉಪಪ್ರಧಾನಿಯಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ೧೯೪೭ ರಿಂದ ೧೯೫೦ ರವರೆಗೆ ತಮ್ಮ ಅನುಭವ ಮತ್ತು ದೂರದೃಷ್ಟಿಯಿಂದ ವಿವಿಧ ಸಂಸ್ಥಾನಗಳನ್ನು ಭಾರತ ಒಕ್ಕೂಟಕ್ಕೆ ವಿಲೀನಗೊಳಿಸಿದ ಐತಿಹಾಸಿಕ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು ಎಂದು ಹೇಳಿದ್ದಾರೆ. ಆಗಿನ ಕಾನೂನು ಸಚಿವ ಡಾ.ಬಿ.ಆರ್. ಅಂಬೇಡ್ಕರ್ ಅವರ ಸಲಹೆ ಮತ್ತು ಮಾರ್ಗದರ್ಶನದೊಂದಿಗೆ ಈ ಪ್ರದೇಶ ೧ ವರ್ಷ, ೧ ತಿಂಗಳು, ೩ ದಿವಸ ಸ್ವಾತಂತ್ರ‍್ಯ ವಿಲ್ಲದೆ ನರಳಾಡಿತ್ತು , ಆಗ ಪೊಲೀಸ್ ಆ್ಯಕ್ಷನ್ ಎಂಬ ೬ ದಿನಗಳ ಕಾರ್ಯಾಚರಣೆ ನಡೆಸಿ ಹಾಗೂ ಸೂಕ್ತ ಪ್ರಕ್ರಿಯೆಗೆ ನೆರವಾಗಿತ್ತು ಎಂದು ತಿಳಿಸಿದ್ದಾರೆ.
ಹೈದರಾಬಾದ್ ಸಂಸ್ಥಾನದ ವಿಲೀನ ಪ್ರಕ್ರಿಯೆಗೆ ಸಂಬAಧಿಸಿದAತೆ ಸೆಪ್ಟೆಂಬರ್ ೧೮ ರಂದು ನಿಜಾಮ್ ತಮ್ಮ ಆಡಳಿತ ಮೋಟಾಕುಗೊಳಿಸಲು ಒಪ್ಪಿಗೆ ಸೂಚಿಸಿ ನಿಜಾಮ ರಾಜಾ ಪ್ರಜೆಗಳು ಇನ್ನು ಮುಂದೆ ಭಾರತ ಸರಕಾರಕ್ಕೆ ಒಳಪಟ್ಟಿದ್ದೇವೆ ಎಂದು ಆದೇಶ ಲಿಖಿತ ರೂಪದಲ್ಲಿ ಅಧಿಕಾರ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು. ಇಂತಹ ಐತಿಹಾಸಿಕ ದಾಖಲೆಗಳನ್ನು ಕಡೆಗಣಿಸಿ, ಸೆಪ್ಟೆಂಬರ್ ೧೭ ರಂದು ಉತ್ಸವ / ವಿಜಯೋತ್ಸವ ಆಚರಿಸುವುದು, ಅಸತ್ಯ ಮತ್ತು ಇತಿಹಾಸದ ಅರ್ಧಸತ್ಯವನ್ನು ಜನರಿಗೆ ಬಿಂಬಿಸುವAತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತ ಸ್ವಾತಂತ್ರ‍್ಯಾನAತರ ದೇಶದಲ್ಲಿ ಸರ್ಕಾರ, ಸಚಿವ ಸಂಪುಟ ಮತ್ತು ಪ್ರಧಾನಮಂತ್ರಿ ಇದ್ದರೂ ಸಹ, ಇತಿಹಾಸದ ನೈಜ ಸಂಗತಿಗಳನ್ನು ನಿರ್ಲಕ್ಷಿಸಿ ತಪ್ಪು ಮಾಹಿತಿಯ ಆಧಾರದ ಮೇಲೆ ಆಚರಣೆಗಳನ್ನು ನಡೆಸುತ್ತಿರುವುದು ವಿಷಾದನೀಯ ಸಂಗತಿ ಎಂದು ನ್ಯಾಯವಾದಿ ಜೆನವೇರಿ ವಿನೋದಕುಮಾರ ಅಭಿಪ್ರಾಯಪಟ್ಟಿದ್ದಾರೆ.
ದೇಶ ವಿಭಜನೆಯ ನಂತರ ಉಂಟಾದ ಹಿಂಸಾಚಾರ, ನಿರಾಶ್ರಿತರ ಸಮಸ್ಯೆ, ಬಡತನ, ಅನಕ್ಷರತೆ ಹಾಗೂ ಆಡಳಿತಾತ್ಮಕ ಸವಾಲುಗಳ ನಡುವೆಯೂ ಭಾರತವನ್ನು ಸಂವಿಧಾನಾತ್ಮಕ ಪ್ರಜಾಪ್ರಭುತ್ವದ ದಾರಿಯಲ್ಲಿ ಮುನ್ನಡೆಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕೊಡುಗೆ ಈ ಭಾಗಕ್ಕೆ ಅಪಾರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತಿಹಾಸವನ್ನು ತಿರುಚುವ ಮೂಲಕ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ಸುಳ್ಳಿನ ಆಧಾರದ ಉತ್ಸವಗಳು ಕ್ಷಣಿಕವಾಗಿರಬಹುದು. ಆದ್ದರಿಂದ, ನಾವು ಸಲ್ಲಿಸಿದ ಮನವಿಗಳನ್ನು, ರಾಜ್ಯ ಸರ್ಕಾರವು ಕೂಡಾ ಐತಿಹಾಸಿಕ ದಾಖಲೆಗಳನ್ನು ಪರಿಗಣಿಸಿ ಸೂಕ್ತವಾಗಿ ಪರಿಶೀಲಿಸಿ ಹೊಸ ಆದೇಶ ಹೊರಡಿಸಿ ಆಚರಣೆ ಕುರಿತು ಸ್ಪಷ್ಟತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.


























