
ಏವಿಯನ್,ಜೂ,೧೮- ಭಾರತದ ಪ್ರಧಾನಿ ನರೇಂದ್ರ ಮೋದಿ ನೋಡಲು ಅತ್ಯಂತ ಸುಂದರವಾದ ವ್ಯಕ್ತಿ, ಏಂಜಲ್ ರೀತಿ ಕಾಣುತ್ತಾರೆ. ಒಪ್ಪಂದ ವಿಷಯಕ್ಕೆ ಬಂದರೆ ಅಷ್ಟೇ ಕಠಿಣ ಮತ್ತು ಕಿಲ್ಲರ್ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ನೇಹಿತನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಫ್ರಾನ್ಸ್‌ನ ಏವಿಯನ್‌ನಲ್ಲಿ ನಡೆದ ಜಿ೭ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಡೊನಾಲ್ಡ್ ಟ್ರಂಪ್ ಬಳಸಿದ ಪದಗಳಿವು.
ಫ್ರಾನ್ಸ್‌ನಲ್ಲಿ ನಡೆದ ಜಿ೭ ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ, ವಿಶ್ವ ನಾಯಕರು ಭಾಗವಹಿಸಿದ್ದ ಭೋಜನಕೂಟದಲ್ಲಿ ಮಾತನಾಡುತ್ತಾ ಪ್ರಧಾನಿ ಅವರನ್ನು “ಶಾಂತ, ಕೂಲ್ ಮತ್ತು ಸಂಪೂರ್ಣ ಕೊಲೆಗಾರ” ಎಂದು ಬಣ್ಣಿಸಿದ್ದಾರೆ.
ಲಘು ಹೇಳಿಕೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ವಂತ ವ್ಯಕ್ತಿತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವದೊಂದಿಗೆ ಹೋಲಿಸುತ್ತಾ, ತಮಗಿಂತ “ಪ್ರಧಾನಿ ನರೇಂದ್ರ ಮೋದಿ ಭಿನ್ನವಾಗಿ, ಶಾಂತ, ಕೂಲ್ ಮತ್ತು ಸಂಪೂರ್ಣ ಕೊಲೆಗಾರ… ನಾನು ಅಲ್ಲ. ಅವರನ್ನು ನೋಡಿ” ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಆಗಾಗ್ಗೆ ಅವರ ನಾಯಕತ್ವ ಶೈಲಿ ಮತ್ತು ರಾಜಕೀಯ ದೀರ್ಘಾಯುಷ್ಯ ಹೊಗಳುತ್ತಿದ್ದಾರೆ. ಈ ತಿಂಗಳ ಆರಂಭದಲ್ಲಿ, ಭಾರತದ ಅತ್ಯಂತ ದೀರ್ಘಾವಧಿಯ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತಲೇ ಈ ಪದ ಬಳಿಸಿದ್ದಾರೆ.
ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ-೭ ಶೃಂಗಸಭೆಯಲ್ಲಿ ನಡೆದ ಸಂವಾದ, ೧೬ ತಿಂಗಳಿಗೂ ಹೆಚ್ಚು ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವಿನ ಮೊದಲ ಮುಖಾಮುಖಿ ಸಭೆಯಾಗಿತ್ತು. ಈ ವೇಳೆ ಪ್ರಧಾನಿ ಅವರನ್ನು ಹೊಗಳುವ ಬರದಲ್ಲಿ ಕಿಲ್ಲರ್ ಎನ್ನುವ ಶಬ್ದವನ್ನೂ ಬಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು ಪ್ರಮುಖ ವಲಯಗಳಲ್ಲಿ ಸಹಕಾರ ಹೆಚ್ಚಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.


























