Home ಜಿಲ್ಲೆ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ

ಲಕ್ಷೆ÷್ಮÃಶ್ವರ, ಜೂ೧: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ದೇವಾಂಗ ನೌಕರರ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಜರಗಿತು.


ಸಮಾರಂಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.


ಜಿಲ್ಲಾ ದೇವಾಂಗ ನೌಕರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕೊಪ್ಪಳವರು ಮಾತನಾಡಿ, ದೇವಾಂಗ ಸಮಾಜ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಿ ಓದಿಗೆ ಗಮನಕೊಡಬೇಕು, ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡು ತಂದೆ ತಾಯಿಗಳಿಗೆ ಮತ್ತು ಸಮಾಜಕ್ಕೆ ಗೌರವವನ್ನು ತರಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮರೇಶ್ವರ ಹುಲಗೂರ ವಹಿಸಿದ್ದರು ಉಪನ್ಯಾಸಕ ಶಿವಾನಂದ ಕಲ್ಲೂರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸುಭಾಷ್ ಹುಲಗೂರ, ಬಾಲಚಂದ್ರ ಹಾಳಕೇರಿ, ಜುಂಜಪ್ಪ ಅಗಡಿ, ಪ್ರಭಾಕರ ಕರ್ಜಗಿ, ಸುಮಂಗಲಾ ದೇವಾಂಗಮಠ, ಸೋಮಣ್ಣ ಡಾಣಗಲ್ಲ, ರಾಮಣ್ಣ ಲಮಾಣಿ, ರಂಜನ್ ಪಾಟೀಲ್, ರಾಜರತ್ನ ಹುಲಗೂರು ಸೇರಿದಂತೆ ಅನೇಕರಿದ್ದರು. ಇದೇ ಸಂದರ್ಭದಲ್ಲಿ ನಿವೃತ್ತ ನೌಕರರನ್ನು ಪದನ್ನೋತಿ ಗೊಂಡ ನೌಕರರನ್ನು ಸನ್ಮಾನಿಸಲಾಯಿತು.
ನಾರಾಯಣ ಹುಲಗೂರ, ಶಿವಾನಂದ ಅಸುಂಡಿ, ಈರಣ್ಣ ಅಂಗಡಿ, ಶಂಕರ್ ಶಿರಹಟ್ಟಿ ನಿರ್ವಹಿಸಿದರು.