
ಜೇವರಗಿ,ಮೇ 15: ಅಫಜಲಪುರ ತಾಲೂಕಿನ ಟಾಕಳಿ ಗ್ರಾಮದಲ್ಲಿ ಚೌಡೇಶ್ವರಿ ಜಾತ್ರಾ ಮಹೋತ್ಸನ ನಾಳೆ ( (ಮೇ 16)ಆಚರಿಸಲಾಗುವುದು. ಪಶ್ಚಿಮ ವಾಹಿನಿಯಾಗಿ ಹರಿಯುವ ಭೀಮೆಯ ಎಡದಂಡೆಯ ಮೇಲೆ ಮಹಾ ಶಕ್ತಿಯಾಗಿ ನೆಲೆಸಿರುವ ಚೌಡೇಶ್ವರಿಯು ಭಕ್ತ ವತ್ಸಲಳಾಗಿ ತನ್ನ ಮಹಿಮೆತೋರಿಸುತ್ತಾ ಬಂದಿರುತ್ತಾಳೆ. 16 ರಂದು ಮುಂಜಾನೆ 6 ಗಂಟೆಗೆ ಚೌಡೇಶ್ವರಿ ದೇವಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಕುಂಕುಮಾರ್ಚಣೆ, 108 ಕುಂಭಾಭಿಷೇಕ, ಸಕಲ ವಾದ್ಯಗಳೊಂದಿಗೆ ಪಲ್ಲಕ್ಕಿ ಸಮೇತವಾಗಿ ಸಾಗನೂರಿನ ಭೀಮಾ ನದಿಯಲ್ಲಿ ಗಂಗಾಸ್ಥಾನ ಟಾಕಳಿ ಗ್ರಾಮದ ಚೌಡೇಶ್ವರಿ ದೇವಸ್ಥಾನಕ್ಕೆ ಮಧ್ಯಾಹ್ನ 12 ಗಂಟೆಯೊಳಗಡೆ ಪಲ್ಲಕ್ಕಿ ತಲುಪುವುದು ನಂತರ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ಸೇವೆ ನೆರವೇರುವುದು ಎಂದು ಶ್ರೀ ಚೌಡೇಶ್ವರಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಹಾಗೂ ಶಾಸಕ ಅಲ್ಲಮಪ್ರಭು ಪಾಟೀಲ ತಿಳಿಸಿದ್ದಾರೆ .ಈ ಸಂದರ್ಭದಲ್ಲಿ ವಿಶ್ವನಾಥ ಅಪ್ಪಾಸಾಬ ವಿಭೂತಿ, ಬಸವರಾಜ ನಾನಾಸಾಬ ವಿಭೂತಿ, ರವಿಂದ್ರ ನಾನಾಸಾಬ ವಿಭೂತಿ, ಧೂಳೇಶ ಶರಣಗೌಡ ಪಾಟೀಲ, ಅಮೀತಾನಂದ ಅಪ್ಪಾಜಿ ಚೌಡೇಶ್ವರಿ ಶಕ್ತಿ ಪೀಠ, ಅಪ್ಪಸಾಬ ಹೊಸಮನಿ, ಶರಬು ಕಲ್ಯಾಣಿ ಇದ್ದರು























