
ವಿಜಯಪುರ.ಅ.೧೦: ಸ್ವಚ್ಛ ಭಾರತ್, ಸ್ವಚ್ಛ ವಿಜಯಪುರ ಅಭಿಯಾನದಡಿ ವಿಜಯಪುರ ಪುರಸಭಾ ಸಿಬ್ಬಂದಿ ಪಟ್ಟಣದಲ್ಲಿ ನಾಗರಿಕರಿಗೆ ಜಾಗೃತಿ ಮೂಡಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕಿ ಲಾವಣ್ಯ ಮಾತನಾಡಿ,ನಿಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ ಸಿಬ್ಬಂದಿಗೆ ನೀಡುವ ಮೂಲಕ ಸ್ವಚ್ಛತೆಗೆ ಸಹಕರಿಸಿ, ಇತರರನ್ನು ಉತ್ತೇಜಿಸಿ ಎಂದು ಮನವಿ ಮಾಡಿದರು.
ಹಸಿ ಕಸಕ್ಕೆ ಹಸಿರು ಡಬ್ಬ, ಮನೆಯ ಹಿತ್ತಲಲ್ಲಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸಿ, ಒಣ ಕಸ ನೀಲಿ ಡಬ್ಬ, ಒಣ ಕಸವನ್ನು ವಾಹನಕ್ಕೆ ನೀಡಿ, ಸ್ಯಾನಿಟರಿ ತ್ಯಾಜ್ಯ ಕೆಂಪು ಡಬ್ಬ, ಸರ್ಜಿಕಲ್ ಸಿರಿಂಜ್, ಡೈಪರ್, ಸ್ಯಾನಿಟರಿ ಪ್ಯಾಡ್ಗಳನ್ನು ಹಾಕಿ, ಇ-ತ್ಯಾಜ್ಯ ಕಪ್ಪು ಡಬ್ಬ, ಹಳೆಯ ಕಂಪ್ಯೂಟರ್ ಬಿಡಿಭಾಗಗಳು, ಎಲೆಕ್ಟಾನ್ನಿಕ್ಸ್, ಹಳೆ ಮೊಬೈಲ್ ಸಿಮ್ಗಳನ್ನು ಇದರಲ್ಲಿ ಹಾಕಿ, ಮೂಲ ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿದ್ದು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮುದಾಯ ಸಂಘಟಕರಾದ ಸಹನ, ಶೈಲಾ.ಸಿ, ಸರಸ್ವತಿ, ಶೃತಿ, ಕವಿತಾ, ವೆಂಕಟಲಕ್ಷ್ಮಮ್ಮ, ಮುಂತಾದವರು ಹಾಜರಿದ್ದರು.


























