Home ಜಿಲ್ಲೆ ಶ್ರೀಗಳ ಸೇವಾ ಕಾರ್ಯಕ್ಕೆ ಸಾಥ್ ನೀಡುವುದು ಕರ್ತವ್ಯ

ಶ್ರೀಗಳ ಸೇವಾ ಕಾರ್ಯಕ್ಕೆ ಸಾಥ್ ನೀಡುವುದು ಕರ್ತವ್ಯ

ಸೈದಾಪುರ:ಶ್ರೀಮಠದ ಆಶ್ರಯದಲ್ಲಿ ಸಾಮೂಹಿಕ ವಿವಾಹಗಳನ್ನು ಹಮ್ಮಿಕೊಂಡು ಜನ ಸಾಮಾನ್ಯರಿಗೆ ಬೆಂಬಲವಾಗಿರುವ ಶ್ರೀಗಳ ಸೇವಾ ಕಾರ್ಯಕ್ಕೆ ಸಾಥ್ ನೀಡುವುದು ಜನಪ್ರತಿನಿಧಿಯಾದ ನನ್ನ ಆದ್ಯಕರ್ತವ್ಯವಾಗಿದೆ ಎಂದು ಮಹಬೂಬನಗರ ಸಂಸದೆಡಿ.ಕೆ. ಅರುಣಾ ಅವರು ಅಭಿಪ್ರಾಯ ಪಟ್ಟರು.
ಸಮೀಪದ ಸುಕ್ಷೇತ್ರ ನೇರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದಲ್ಲಿ ಸಂಸದರ ಅನುದಾನದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಪೀಠಾಧಿಪತಿ ಪಂಚಮ ಸಿದ್ದಲಿಂಗ ಶ್ರೀಗಳು ಕ್ರಿಯಾಶೀಲರಾಗಿದ್ದು, ಅವರ ನೇತೃತ್ವದಲ್ಲಿ ಶ್ರೀಮಠದ ಭವ್ಯ ಪರಂಪರೆ ಮರುಕಳುಹಿಸುತ್ತಿದೆ. ಕಳೆದ ಒಂದೂವರೆ ದಶಕದಲ್ಲಿ ರಕ್ತದಾನ ಶಿಬಿರ, ಅರೋಗ್ಯ ಶಿಬಿರ, ಸಾಮೂಹಿಕ ವಿವಾಹ, ಗೊ ಸಂರಕ್ಷಣೆಗಾಗಿ ಗೊ ಶಾಲಾ ಸ್ಥಾಪನೆ, ಅಸಹಾಯಕ ಮಕ್ಕಳಿಗಾಗಿ ಆಶ್ರಯ ಹೀಗೆ ಕೇವಲ ಧಾರ್ಮಿಕ ಮಾತ್ರವಲ್ಲದೆ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಸಂಗೀತ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಜನರಿಗೆ ಅನುಕೂಲಕರವಾಗಿ ಕೆಲಸ ಮಾಡುತ್ತಿದ್ದಾರೆ ಪೂಜ್ಯರ ಸತ್ ಕಾರ್ಯಗಳಿಗೆ ಸಾಥ್ ನೀಡುವುದು, ಕ್ಷೇತ್ರದ ಸಂಸದೆಯಾಗಿ ನನ್ನ ಆದ್ಯಕರ್ತವ್ಯ, ಜತೆಗೆ ಶ್ರೀಮಠದ ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಂತರ ಶ್ರೀಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಶ್ರೀಗಳು ಮಾತನಾಡಿ, ಜನರ ಅಗತ್ಯಗಳಿಗೆ ಸ್ಪಂದಿಸಿ ಮೂಲಸೌಕರ್ಯ ಹಾಗೂ ಜನೋಪಯೋಗಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವ ಸಂಸದೆಡಿ.ಕೆ. ಅರುಣಾ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ವೇಳೆ ಗ್ರಾಪಂ ಸರಪಂಚ್ ಡಿ.ವೆಂಕಟಮ್ಮ, ಮುಖಂಡರಾದರ ತನಪಾಂಡುರೆಡ್ಡಿ, ಬಲರಾಮರೆಡ್ಡಿ, ಜಯಾನಂದರೆಡ್ಡಿ, ಆರ್.ವಿದ್ಯಾಸಾಗರ್, ಉಟ್ಕೂರ್ ಭಾಸ್ಕರ್, ಬಂಗ್ಲಾ ಲಕ್ಷ್ಮೀಕಾಂತ, ಕರ್ನಿ ಸ್ವಾಮಿ, ವಾಕಿಟಿ ಮಲ್ಲೇಶ, ನಲ್ಲೆ ನರಸಪ್ಪ, ಕನಕರಾಜ, ಮಂಜುನಾಥ.ಕೆ, ಯಲ್ಲಾರಡ್ಡಿ, ಕೃಷ್ಣಯ್ಯ.ಕೆಆನಂದ, ಹುಸೇನಪ್ಪ ಸೇರಿದಂತೆ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.