
ಕಲಬುರಗಿ:ರಾಜ್ಯ ಸರ್ಕಾರ ಹಾಲಿನ ದರ ಲೀಟರ್ ಗೆ ರೂ. 8, 10,12 ರೂಪಾಯಿ ಹೆಚ್ಚಳ ಮಾಡಿರುವುದನ್ನು ಹಾಗೂ ಬಸ್ ದರಏರಿಕೆಯ ಪ್ರಸ್ತಾವನೆಯನ್ನು ಖಂಡಿಸಿ ಎಸ್ಯುಸಿಐ ಕಮ್ಯುನಿಸ್ಟ್ ಪಕ್ಷದಿಂದಇಂದು ಕಲಬುರಗಿ ನಗರದಎಸ್.ವಿ.ಪಿ.ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ರಾಜ್ಯದಜನರು ಬರಗಾಲದಿಂದ ಹಾಗೂ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಸಂದರ್ಭದಲ್ಲಿಯೇರಾಜ್ಯ ಸರ್ಕಾರವು ಹಾಲಿನ ದರವನ್ನು ಪ್ರತಿ ಲೀಟರಿಗೆರೂ. 8 ರಿಂದ 12 ರೂಪಾಯಿವರೆಗೆ ಹೆಚ್ಚಳ ಮಾಡಿರುವ ನಿರ್ಧಾರವನ್ನುತೀವ್ರವಾಗಿಖಂಡಿಸಲಾಯಿತು. ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಸಮಸ್ಯೆಯನ್ನು ಪರಿಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕು ಎಂದುಇದೇ ಸಂದರ್ಭದಲ್ಲಿಒತ್ತಾಯಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಯು ಸಿ ಐ ಕಮ್ಯುನಿಸ್ಟ್ ಪಕ್ಷದಜಿಲ್ಲಾ ಸಮಿತಿಯ ಹಿರಿಯ ಸದಸ್ಯರಾದ ಕಾ.ವಿ. ನಾಗಮ್ಮಾಳ್ ಮಾತನಾಡುತ್ತಾ ಮುಂಬರುವ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿರಿಸಿಕೊಂಡು, ಕರ್ನಾಟಕ ಹಾಲು ಒಕ್ಕೂಟದರಾಜಕಾರಣಿ ಪದಾಧಿಕಾರಿಗಳು ಗ್ರಾಮೀಣ ಹೈನುಗಾರರಿಗೆ ಬೆಂಬಲ ನೀಡುವ ಹೆಸರಿನಲ್ಲಿಇಂತಹಒತ್ತಾಯವನ್ನು ಮಾಡಿದ್ದಾರೆಎಂಬುದು ಸ್ಪಷ್ಟವಾಗಿದೆ. ಸರ್ಕಾರ ಹಾಲು ಉತ್ಪಾದಕರ ಮತ್ತುಗ್ರಾಹಕರಇಬ್ಬರ ಹಿತವನ್ನು ಪರಿಗಣಿಸಬೇಕು. ಮೇವು, ಪಶು ಆಹಾರ ಇತ್ಯಾದಿಗಳನ್ನು ರಿಯಾಯಿತಿದರದಲ್ಲಿ ಪೂರೈಸಬೇಕು. ಕೆಎಂಎಫ್ ನಲ್ಲಿರುವದುಂದುವೆಚ್ಚತಡೆಗಟ್ಟಬೇಕು. ಉತ್ಪಾದನೆಯ ವೆಚ್ಚ ಕಡಿಮೆ ಮಾಡುವ ಬದಲಿಗೆದರ ಹೆಚ್ಚಳವನ್ನೇ ಪರಿಹಾರಎಂದು ಪರಿಗಣಿಸಿದರೆ ಆಗ ಹಣದುಬ್ಬರದ ವಿಷಚಕ್ರಕ್ಕೆಎಲ್ಲರೂ ಸಿಕ್ಕಿಹಾಕಿಕೊಳ್ಳುತ್ತಾರೆ. ಹಾಲು ಮಕ್ಕಳಿಗೆ ಸೇರಿದಂತೆಎಲ್ಲರಿಗೂಅವಶ್ಯಕ ಪೌಷ್ಟಿಕ ಆಹಾರವಾದಕಾರಣ ಸರ್ಕಾರತಕ್ಷಣವೇತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕುಎಂದುಅಗ್ರಹಿಸಲಾಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮದುಂದು ವೆಚ್ಚಗಳನ್ನು ಕಡಿತ ಮಾಡಬೇಕು, ದೊಡ್ಡದೊಡ್ಡ ಬಂಡವಾಳಗಾರರ ಸಾಲ ಮನ್ನಾ ಮಾಡುವುದನ್ನು ನಿಲ್ಲಿಸಬೇಕು. ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಎಸ್ಯು ಸಿ ಐ ಕಮ್ಯುನಿಸ್ಟ್ ಪಕ್ಷದಜಿಲ್ಲಾ ಸಮಿತಿಯ ಸದಸ್ಯರಾದ ಕಾ. ಜಗನ್ನಾಥಎಸ್. ಎಚ್. ರವರು ಪ್ರತಿಭಟನೆಅಧ್ಯಕ್ಷತೆ ವಹಿಸಿ ಮಾತನಾಡಿಇದೇ ನವೆಂಬರ್ 4 ರಂದು ಬಸ್ ದರವನ್ನು ಶೇ. 40 ರಷ್ಟು ಹೆಚ್ಚಿಸುವಕುರಿತುತೀರ್ಮಾನ ಕೈಗೊಳ್ಳಲಾಗುವುದು ಎಂದುರಾಜ್ಯ ಸರ್ಕಾರ ತಿಳಿಸಿದೆ. ಇದುಅತ್ಯಂತಜನವಿರೋಧಿ ನಿಲುವಾಗಿದ್ದು, ಜನಸಾಮಾನ್ಯರು ಈಗಾಗಲೇ ಅಗತ್ಯವಸ್ತುಗಳ, ಆಹಾರ ಧಾನ್ಯಗಳ ಬೆಲೆ ಏರಿಕೆಯಿಂದತೀವ್ರ ಸಂಕಷ್ಟದಲ್ಲಿದ್ದು ಬಸ್ ದರವನ್ನುಯಾವಕಾರಣಕ್ಕೂಏರಿಸಬಾರದು ಮತ್ತುಕೂಡಲೇ ಹಾಲಿನ ದರಏರಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಅಧ್ಯಕ್ಷತೆಯನ್ನು ಕಾ. ಹಣಮಂತಎಸ್. ಎಚ್. ವಹಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿಜಿಲ್ಲಾ ನಾಯಕರಾದಎಸ್. ಎಮ್. ಶರ್ಮಾ, ಡಾ. ಸೀಮಾ, ಮಹೇಶ್ಎಸ್. ಬಿ. ಹಾಗೂ ಸಂದೀಪ, ಸಂತೋಷ ಹಿರವೆ, ರಾಧಾ, ತುಳಜಾರಾಮ, ವೆಂಕಟೇಶದೇವದುರ್ಗಾ, ಪ್ರೀತಿದೊಡ್ಡಮನಿ, ಈಶ್ವರ, ರಮೇಶದೇವಕರ್, ವಿಶಾಲಾಕ್ಷಿ ಪಾಟೀಲ್, ಶಿವರಾಜ, ಸಾಬಮ್ಮ, ಭೀಮುಆಂದೋಲಾ, ಹಾಗೂ ಪಕ್ಷದಕಾರ್ಯಕರ್ತರು ಮತ್ತು ಕಲಬುರಗಿ ನಗರದ ನಾಗರೀಕರು ಸರ್ಕಾರದ ಹಾಲಿನ ದರಏರಿಕೆಯನ್ನುಕೈಬಿಡುವಂತೆ ಪ್ರತಿಭಟನೆಯಲ್ಲಿ ಭಾಗವಹಿಸಿ ಆಗ್ರಹಿಸಿದರು.























