Home ಜಿಲ್ಲೆ ಉಪವಿದ್ಯುತ್ ಕೇಂದ್ರಗಳು ಮಂಜೂರು

ಉಪವಿದ್ಯುತ್ ಕೇಂದ್ರಗಳು ಮಂಜೂರು


ಚನ್ನಮ್ಮನ ಕಿತ್ತೂರು,ಜು.೧೩: ಉಪವಿದ್ಯುತ್ ಕೇಂದ್ರಗಳು ತಾಲೂಕಿನ ತುರಮರಿ ಹಾಗೂ ತಿಗಡೊಳ್ಳಿ ಗ್ರಾಮಕ್ಕೆ ಮಂಜೂರಾಗಿದ್ದು ಈ ಭಾಗದ ಜನತೆಗೆ ಸಂತಸ ಮೂಡಿಸಿದೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಹಬೀಬ ಶಿಲ್ಲೇದಾರ ಹರ್ಷವ್ಯಕ್ತಪಡಿಸಿದರು.


ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರನ್ನು ಕೆಇಬಿ ಕಛೇರಿ ಅಧಿಕಾರಿಗಳ ಜೊತೆಗೂಡಿ ಸತ್ಕರಿಸಿ ಅವರು ಮಾತನಾಡಿದರು. ಸಾರ್ವಜನಿಕ ಹಾಗೂ ರೈತರಿಗೆ ವಿದ್ಯುತ್ ಕೇಂದ್ರದಿAದ ಹೆಚ್ಚು ಸಹಾಯವಾಗಬೇಕೆನ್ನುವುದೇ ನನ್ನ ಆಶಯವಾಗಿದೆ ಎಂದರು.


ಇದೇ ವೇಳೆ ಕೆಇಬಿ ಸಿಬ್ಬಂದಿಗಳು ಶಾಸಕ ಬಾಬಾಸಾಹೇಬ ಪಾಟೀಲರನ್ನು ಸತ್ಕರಿಸಿದರು.
ಈ ವೇಳೆ ಹೆಸ್ಕಾಂ ಎಇಇ ಶಿವಾನಂದ ಬಾಗಲಕೋಟಿ, ಶಾಖಾಧಿಕಾರಿ ಶ್ರೀಶೈಲ ಸವದತ್ತಿ, ಮೇಲ್ವಿಚಾರಕ ಅನ್ನೋಜಿರಾವ್ ಜಾಧವ, ಕೆ ನದಾಪ ಸೇರಿದಂತೆ ಸಿಬ್ಬಂದಿ, ಸಾರ್ವಜನಿಕರಿದ್ದರು.