
ಚಂದಾಪುರ (ಆನೇಕಲ್)ಆ. ೨೫-ವಿದ್ಯಾರ್ಥಿಗಳು ಸರ್ಕಾರಿ ಶಾಲೆಯೆಂಬ ಕೀಳರಿಮೆಯನ್ನು ಬಿಟ್ಟು ಜೀವನದಲ್ಲಿ ಛಲವನ್ನು ಇಟ್ಟುಕೊಂಡು ಶ್ರದ್ದೆಯಿಂದ ವಿದ್ಯಾಬ್ಯಾಸ ಮಾಡಿ ಜೀವನದಲ್ಲಿ ಖಂಡಿತವಾಗಿ ಯಶಸ್ಸು ತಮಗೆ ಲಭಿಸುತ್ತದೆ ಎಂದು ಆಂಥೆಮ್ ಬಯೋಸೈನ್ಸಸ್ ಸಂಸ್ಥೆಯ ಸಂಸ್ಥಾಪಕ ಕೆ.ಸಿ.ರವೀಂದ್ರ ತಿಳಿಸಿದರು.
ಚಂದಾಪುರ ಛತ್ರಖಾನೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಆಂಥೆಮ್ ಬಯೋಸೈನ್ಸಸ್ ಮತ್ತು ಶ್ರೀ ಜಯ ದುರ್ಗ ಸೇವಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶಾಲಾ ಬ್ಯಾಗ್. ನೋಟ್ ಪುಸ್ತಕ ಸೇರಿದಂತೆ ಕಲಿಕಾ ಸಾಮಾಗ್ರಿ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆ ಅಥವಾ ಖಾಸಗಿ ಎನ್ನುವುದಕ್ಕಿಂತ ವಿದ್ಯಾರ್ಥಿಯ ಪರಿಶ್ರಮ ಬಹಳ ಮುಖ್ಯವಾಗಿದೆ.ಸರ್ಕಾರಿ ಶಾಲೆಗಳಲ್ಲಿ ಓದಿದವರೇ ದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂಬುದನ್ನು ಮರೆಯಬಾರದು.ಶಾಲೆಯಲ್ಲಿ ಶಿಕ್ಷಕರು ಬೋದಿಸಿದ ಪಾಠವನ್ನು ಚೆನ್ನಾಗಿ ಓದುವ ಮೂಲಕ ಮತ್ತು ದಾನಿಗಳು ನೀಡುವ ಕಲಿಕಾ ಸಾಮಾಗ್ರಿಗಳನ್ನುಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡು ಉತ್ತಮವಾಗಿ ವಿದ್ಯಾಬ್ಯಾಸ ಮಾಡಿ ತಾನು ಓದಿದ ಶಾಲೆಗೆ ಮತ್ತು ಗ್ರಾಮಕ್ಕೆ ಹೆಸರು ತರುವಂತಹ ಕೆಲಸ ಮಾಡಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಜಯ ದುರ್ಗ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹೆಚ್.ಜಯಲಷ್ಮೀ. ಕಾರ್ಯಾಧ್ಯಕ್ಷ ಜೆ.ಮಂಜೇಗೌಡರು. ಚಂದಾಪುರ ಪುರಸಭೆ ಮಾಜಿ ಸದಸ್ಯರಾದ ಮಂಜುಳ ನೀಲಕಂಠಯ್ಯ. ಸಮಾಜ ಸೇವಕರಾದ ಚಂದಾಪುರ ಬಿ.ಎಸ್.ನೀಲಕಂಠಯ್ಯ ಹಾಗೂ ಶಿಕ್ಷಕರು. ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು































