Home ಜಿಲ್ಲೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ:ಶಾಸಕ ಪ್ರಭು ಚವ್ಹಾಣ

ಮೂಲ ಸೌಕರ್ಯ ಕಲ್ಪಿಸಲು ಕ್ರಮ:ಶಾಸಕ ಪ್ರಭು ಚವ್ಹಾಣ

ಬೀದರ:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮೇ.27ರಂದು ಔರಾದ(ಬಿ) ಪಟ್ಟಣ ಸೇರಿದಂತೆ ವಿವಿಧೆಡೆ ಸಂಚರಿಸಿ ಸುಮಾರು 8 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ವನಮಾರಪಳ್ಳಿ ಗ್ರಾಮದಲ್ಲಿ 81.60 ಲಕ್ಷ ರೂ. ವೆಚ್ಚದಲ್ಲಿ ವನಮಾರಪಳ್ಳಿಯಿಂದ ಕೂಡ್ಲಿ ಬಾರ್ಡರ್‍ವರೆಗಿನ ರಸ್ತೆ, 105 ಲಕ್ಷ ಮೊತ್ತದ ಚಿಮ್ಮೆಗಾಂವನಿಂದ ಹಂದಿಕೇರಾ ರಸ್ತೆ, ಧೋಪರವಾಡಿಯಿಂದ ಅಮಕ್ಷಿದ್ ರಸ್ಥೆ, 9 ಲಕ್ಚದ ಸಮುದಾಯ ಭವನ, ಹಂದಿಕೇರಾದಲ್ಲಿ 58 ಲಕ್ಷ ಮೊತ್ತದ ಹೆಚ್ಚುವರಿ ತರಗತಿ ಕೋಣೆಗಳು, ಭಂಡಾರಕುಮಟಾದಲ್ಲಿ 20 ಲಕ್ಷದ ಬ್ರಿಜ್ ಕಂ ಬ್ಯಾರೇಜ್ ದುರಸ್ತಿ, ಕಾಳಾಪಟ್ಟಿ ತಾಂಡಾದಿಂದ ಸಾವರಗಾಂವ ಎಂ.ಎಸ್ ಬಾರ್ಡರ್ ಹಂಗರಗಾ ವರೆಗೆ 65 ಲಕ್ಷದ ಮೊತ್ತದ ರಸ್ತೆ, ಔರಾದ ಪಟ್ಟಣದಲ್ಲಿ ಉದ್ಯಾನವನ ಅಭಿವೃದ್ಧಿ, ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಬೋರವೆಲ್ ಅಳವಡಿಕೆ, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಸೇರಿದಂತೆ ಸುಮಾರು 3 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದ್ದೇನೆ. ಜನತೆಗೆ ಅತ್ಯಂತ ಅವಶ್ಯಕತೆಯಿರುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಕಾಮಗಾರಿಯೂ ಅತ್ಯುತ್ತಮ ಗುಣಮಟ್ಟದಿಂದ ಆಗಬೇಕು. ಅಧಿಕಾರಿಗಳು ನಿರಂತರವಾಗಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಕಳಪೆ ಸಾಮಗ್ರಿಗಳನ್ನು ಬಳಸಬಾರದು. ಅಂದಾಜು ಪತ್ರಿಕೆಯಲ್ಲಿರುವಂತೆ ಮತ್ತು ಮಾನದಂಡಗಳಿಗೆ ಅನುಗುಣವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜನರ ವಿಶ್ವಾಸಕ್ಕೆ ಧಕ್ಕೆ ತರುವ ರೀತಿಯಲ್ಲಿ ಕೆಲಸ ಮಾಡಿದರೆ ಯಾರನ್ನೂ ಬಿಡುವುದಿಲ್ಲ. ಕಳಪೆ ಕಾಮಗಾರಿ ನಡೆಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ದಯಾನಂದ ಘೂಳೆ, ಕೇರಬಾ ಪವಾರ, ಸಂತೋಷ ಪೆÇೀಕಲವಾರ, ಸಂಜು ವಡೆಯಾರ್, ಅಬ್ಜಲ್ ಪಠಾಣ, ಚೇತನ ಕಪ್ಪಿಕೇರೆ, ಬಾಬು ರಾಠೋಡ, ರಾಮ ನರೋಟೆ, ಶಿವಾಜಿ ಬೋಗಾರ, ವಿರೇಶ ಅಲ್ಮಾಜೆ, ಪ್ರಕಾಶ ಅಲ್ಮಾಜೆ, ಅಶೋಕ ಅಲ್ಮಾಜೆ, ರಮೇಶ ಗೌಡಾ, ಬಸವರಾಜ ಹಳ್ಳೆ, ಅಂಬಾದಾಸ ನೇಳ್ಗೆ, ಆನಂದ ದ್ಯಾಡೆ, ಸಂತೋಷ ಫುಲಾರೆ, ಸಂದೀಪ ಪಾಟೀಲ ಸೇರಿದಂತೆ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.