Home ಜಿಲ್ಲೆ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸಸ್ಟೇಬಲ್, ಎಎಸ್‍ಐ ಅಮಾನತು

ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ಮಹಿಳಾ ಹೆಡ್ ಕಾನ್ಸಸ್ಟೇಬಲ್, ಎಎಸ್‍ಐ ಅಮಾನತು

ಕಲಬುರಗಿ,ಜೂ.10-ಬಿಎನ್‍ಎಸ್ ಮತ್ತು ಕಲಂ 4,6 ಪೋಕ್ಸೋ ಕಾಯ್ದೆ ಪ್ರಕರಣದಲ್ಲಿ ನೊಂದ ಬಾಲಕಿಯ ಹೇಳಿಕೆ ಪಡೆದುಕೊಳ್ಳಲು ಫಿರ್ಯಾದಿಗೆ ಪೊಲೀಸ್ ಠಾಣೆಗೆ ಕರೆಯಿಸಿಕೊಂಡು ಸದರಿ ಪ್ರಕರಣದಲ್ಲಿ ಸಹಾಯ ಮಾಡುವುದದಕ್ಕಾಗಿ 10 ಸಾವಿರ ರೂ.ಬೇಡಿಕೆ ಇಟ್ಟು, 9 ಸಾವಿರ ರೂ.ಹಣ ಪಡೆದುಕೊಳ್ಳುವಾಗು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್ಸಸ್ಟೇಬಲ್ ಶ್ರೀಮತಿ ಜ್ಯೋತಿ ಮತ್ತು ಎಎಸ್‍ಐ ಶಿವಶರಣಪ್ಪ ಅವರನ್ನು ಅಮಾನತ್ತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪೆÇೀಕ್ಸೋ ಪ್ರಕರಣದಲ್ಲಿ ಪಿರ್ಯಾದಿಗೆ ಸಹಾಯ ಮಾಡುವುದಾಗಿ ಹಣದ ಬೇಡಿಕೆ ಇಟ್ಟು ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿ ಗಂಭೀರ ಲೋಪವೆಸಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೆÇಲೀಸ್ (ಶಿಸ್ತಿನ ನಡಾವಳಿ) ನಿಯಮಾವಳಿ 1965/89 ರ ನಿಯಮ 5 ರನ್ವಯ ಇಲಾಖಾ ಶಿಸ್ತಿನ ಕ್ರಮ ಬಾಕಿಯಲ್ಲಿರಿಸಿ ಸದರಿ ಸಿಬ್ಬಂದಿಯವರನ್ನು ಅಮಾನತ್ತುಗೊಳಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.