Home ಜಿಲ್ಲೆ ಕಲಬುರಗಿ ಜೂಜಾಟ:8 ಜನರ ಬಂಧನ

ಜೂಜಾಟ:8 ಜನರ ಬಂಧನ

ಕಲಬುರಗಿ,ಜೂ.10-ನಗರದ ಶಿವಾಜಿ ನಗರದ ಹನುಮಾನ ದೇವಸ್ಥಾನ ಮುಂದುಗಡೆಯ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಚೌಕ್ ಪೊಲೀಸ್ ಠಾಣೆ ಎಎಸ್‍ಐ ರಮೇಶ ಗುತ್ತೇದಾರ, ಸಿಬ್ಬಂದಿಗಳಾದ ಶಿವಾನಂದ, ಸುರೇಶ, ರಾಜಕುಮಾರ, ಸೈಯ್ಯದ್ ತೌಸಿಫ್ ಹುಸೇನ್ ಅವರು ದಾಳಿ ನಡೆಸಿ ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ಜಮಾದಾರ, ಶಿವಶರಣ ಉಡಗಿ, ಈಶ್ವರ ಭುತೆ, ಬಸವಪ್ರಸಾದ ಮಠಪತಿ, ದತ್ತಾತ್ರಯ ಅಲಿಯಾಸ್ ದತ್ತು ಜಾನಕರ, ಶಿವಪುತ್ರ ಪೂಜಾರಿ, ಕಿರಣ್ ನೇಕಾರ ಎಂಬುವವರನ್ನು ಬಂಧಿಸಿ 7,800 ರೂ.ನಗದು, 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.