
ಕಲಬುರಗಿ,ಜೂ.10-ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಜನಪರ ಕೆಲಸಗಾರರು, ಅನುಭವಿಗಳು, ತನ್ನ 4 ದಶಕಗಳ ರಾಜಕೀಯದಲ್ಲಿ ಸದಾಕಾಲ ಜನಸೇವೆ ಮಾಡುತ್ತಿದ್ದಾರೆ. ಇಂತಹವರು ಡಿಕೆಶಿ ಸರ್ಕಾರದಲ್ಲಿ ಮಂತ್ರಿಗಳಾಗಬೇಕು. ಇದಕ್ಕಾಗಿ ನಾವು ಕಾಂಗ್ರೆಸ್ ಹೈಕಮಾಂಡ್, ಸಿಎಂ ಬಳಿ ನಿಯೋಗ ಹೋಗಬೇಕು ಎಂದು ಚಿಣಮಗೇರಿ ಸಿದ್ದರಾಮ ಶಿವಾಚಾರ್ಯರು ಹೇಳಿದ್ದಾರೆ.
ಮೇಳಕುಂದ ಬಿ ಗ್ರಾಮದಲ್ಲಿ 2025-26ನೇ ಸಾಲಿನ “ಮುಖ್ಯಮಂತ್ರಿಗಳ ಮೂಲಸೌಕರ್ಯ ಯೋಜನೆ ಅಡಿಯಲ್ಲಿ ಶ್ರೀ ಸಿದ್ದಯ್ಯಪ್ಪ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ಎಲ್ಲರಿಗೂ ಅಧಿಕಾರ ಬೇಕು, ಹೊಸಬರು ಮಂತ್ರಿಯಾಗಬೇಕು. ಇದರಿಂದ ಹೆಚ್ಚಿನ ಜನಸೇವೆಯಾಗುತ್ತದೆ. ಅಲ್ಲಂಪ್ರಭು ಪಾಟೀಲರು ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ ಸಿರಿವಂತರಾಗಿರುವ ರಾಜಕಾರಣಿಯಾಗಿದ್ದಾರೆ. ಅವರನ್ನುತುಂಬ ವರ್ಷದಿಂದ ಬಲ್ಲೆ.ಇಂಥವರು ಮಂತ್ರಿಯಾದಲ್ಲಿ ಹೆಚ್ಚಿನ ಜನರ ಕೆಲಸಗಳಾಗುತ್ತವೆ, ಧಾರ್ಮಿಕವಾಗಿಯೂ ಮಠ, ಮಂದಿರಗಳನ್ನು ಅವರು ಪೆÇೀಷಿಸುತ್ತಾರೆಂದರು.
ವೇದಿಕೆಯಲ್ಲಿದ್ದ ಶಾಸ ಅಲ್ಲಂಪ್ರಭು ಪಾಟೀಲರನ್ನೇ ಉದ್ದೇಶಿಸಿ ನೀವು ಯಾವಾಗ ಕರೆದರು ನಾವು ನಿಮ್ಮೊಂದಿಗೆ ನಿಯೋಗದಲ್ಲಿ ಬರಲು ಸಿದ್ಧ. ಸಿಎಂ. ಹೈಕಮಾಂಡ್ ಎಲ್ಲರಿಗೂ ಭೇಟಿಮಾಡಿ ನಿಮಗೆ ಮಂತ್ರಿಗಿರಿ ಯಾಕೆ ಕೊಡಬೋಕು ಎಂಬುದನ್ನು ನಾವು ತಿಳಿಸುತ್ತೇವೆಂದು ಸಿದ್ದರಾಮಯ ಶಿವಾಚಾರ್ಯರು ಹೇಳಿದರು.
ಸಭೆಯಲ್ಲಿ ಮಾತನಾಡಿದ ಪಾಳಾದ ಕಟ್ಟಿಮನಿ ಹಿರೇಮಠದ ಡಾ. ಗುರುಮೂರ್ತಿಶಿವಾಚಾರ್ಯರು ಕೂಡಾ ಅಲ್ಲಂಪ್ರಬು ಪಾಟೀಲರಿಗೆ ಮಂತ್ರಿಗಿರಿ ಸಿಗಬೇಕು. ನೂತನ ಸರ್ಕಾರದಲ್ಲಿ ಇವರಿಗೆ ಮಂತ್ರಿಯಾಗಿಸುವ ಬಗ್ಗೆ ಸ್ವೀಮಜಿಗಳು ಪಕ್ಷದ ಉನ್ನತ ಹಂತದಲ್ಲಿ ಆಗ್ರಹಿಸಲು ಇದು ಸಕಾಲವೆಂದರು. ಮೇಳಕುಂದಾ ಗ್ರಾಮದಲ್ಲಿ ಭೋಗಲಿಂಗೇಶ್ವರ ಮಂದಿರ ಜೀರ್ಣೋದ್ಧಾರಕ್ಕೆ ಅಲ್ಲಂಪ್ರಭು ಅವರ ಕೊಡುಗೆ ಅಪಾರವೆಂದರು.
ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಾಸಕ ಅಲ್ಲಂಪ್ರಭು ಪಾಟೀಲರು ಧಾರ್ಮಿಕ ಸಾಮರಸ್ಯ ಸಮಾಜದಲ್ಲಿರಬೇಕು. ಮಠ, ಮಂದಿರಗಳಿಂದ ಸಮಾಜ ಸುಂದರವಾಗಿರುತ್ತದೆ. ಮೇಳಕುಂದಾದಲ್ಲಿ ಶಶಿಕುಮಾರ ದೇವರ ನೇತೃತ್ವದಲ್ಲಿ ಆದಷ್ಟು ಬೇಗ ಹೊಸ ಮಠ, ಗುರುಭವ ನ ನಿರ್ಮಾಣವಾಗಲಿ, ಎಲ್ಲರೂ ಸೇರಿ ಇಲ್ಲೊಂದು ಗುರುಸ್ಥಳ ಮಾಡಿ ಪಾವನರಾಗೋಣವೆಂದರು. ತಾವು ಶಾಸಕರಾಗಿ ಕೈಗೊಂಡ ಪ್ರಗತಿ ಕೆಲಸಗಳನ್ನು ಪಟ್ಟಿ ಮಾಡಿದರು. ಕೆಲಸದ ಗುಣಮಟ್ಟದಲ್ಲಿ ರಾಜೀ ಬೇಡ. ಪ್ರಸನೆ ಮಾಡಿರೆಂದು ಸೇರಿದ್ದ ಜನರಿಗೆ ಕರೆ ನೀಡಿದರು.
ಬಡದಾಳ ತೇರಿನ ಮಠದ ಚೆನ್ನಮಲ್ಲ ಶಿವಾಚಾರ್ಯರು ಮಾತನಾಡುತ್ತ ಮೇಳಕುಂದಾದಲ್ಲಿ ಬೇಗ ಮಠದ ಕಟ್ಟಡ ತಲೆ ಎತ್ತಲಿ. ಧಾರ್ಮಿಕವಾಗಿ ಈ ನೆಲದಲ್ಲಿ ಚಟುವಟಿಕೆಗಳು ಶುರುವಾಗಲಿ ಎಂದು ಹರಸಿದರು.
ಇದೇ ಸಂದರ್ಭದಲ್ಲಿ ಸಿದ್ದಯ್ಯಪ್ಪ ಮಠದ ಗುರುಭವನ ನಿರ್ಮಾಣ ಯೋಜನೆಗೆ ಕೈ ಜೋಡಿಸಲು, ದೇಣಿಗೆನೀಡಲು ಭಕ್ತರಿಗೆ ಗುರುಗಳು ದೇಣಿಗೆ ಪುಸ್ತಕ ಕೊಟ್ಟು ಹರಸಿದರು.
ಅಲ್ಲಂಪ್ರಭು ಜೊತೆ ನಿರಂತರ ಜಗಳ-ಹಳೆ ನೆನಪು ಆಂದೋಲಾ ಶ್ರೀ ಮೆಲಕು
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಆಂದೋಲಾ ಸಿದ್ದಲಿಂಗ ಶ್ರೀಗಳು ಮಾತನಾಡುತ್ತ ಶಾಸಕರಾದ ಅಲ್ಲಂಪ್ರಭು ಪಾಟೀಲರು ಮೇಳಕುಂದಾದಲ್ಲಿ ಮಠ ನಿಮ್ರಾಣಕ್ಕೆ ನೀಡುತ್ತಿರುವ ಸಹಕಾರವನ್ನು ಮೆಚ್ಚಿಕೊಡರು. ತಾವು ಹಾಗೂ ಅಲ್ಲಂಪ್ರಭು ಇಬ್ಬರೂ ಜೇವರ್ಗಿಯಲ್ಲಿ 2004 ರವರೆಗೂ ವೇದಿಕೆಯಲ್ಲಿ ಜಗಳವಾಡಿದ ಸಂದರ್ಭಗಳನ್ನು ಮೆಲಕು ಹಾಕಿದರು. ಜೇವರ್ಗಿಯಲ್ಲೇ ಇದ್ದಿದ್ರೆ ಇವರು ರಾಜಕೀಯವಾಗಿ ಬೆಳೆಯುತ್ತಿರಲಿಲ್ಲ. ಇವರು ಕಲಬುರಗಿಗೆ ಬಂದು ಬೆಳೆದಿದ್ದಾರೆಂದು ಅಲ್ಲಂಪ್ರಭು ಪಾಟೀಲರಿಗೆ ಶುಭ ಕೋರಿದರು. 2028 ರಲ್ಲಿ ಮತ್ತೆ ಇವರೊಂದಿಗೆ ಜಗಳವಾಡುತ್ತೇನೆಂದು ಸಿದ್ದಲಿಂಗ ಸ್ವಾಮೀಜಿ ಹೇಳುತ್ತ ಶಿವಸೇನೆಯ ರಾಜ್ಯಾಧ್ಯಕ್ಷರಾಗಿರುವ ತಾವೂ ಅಸೆಂಬ್ಲಿ ಚುನಾವಣೆ ಕಣದಲ್ಲಿ ಇಳಿಯುವ ಸುಳಿವು ಕೊಟ್ಟಾಗ ಜನ ಕರತಾಡನ ಮಾಡಿದರು.
ಸಿದ್ದಯ್ಯಪ್ಪ ಮಂದಿರದ ಧಾರ್ಮಿಕ ಗುರುಗಳಾದ ಶಶಿಕುಮಾರ್ ದೇವರು ವೇದಿಕೆಯಲ್ಲಿದ್ದ ಸರ್ವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪೂಜ್ಯರಾದ ಸಿದ್ದರಾಮ ಶಿವಾಚಾರ್ಯರು, ಚಿಣಮಗೇರಿ, ಗುರುಮೂರ್ತಿ ಶಿವಾಚಾರ್ಯರು, ಪಾಳಾ, ಸಿದ್ಧಲಿಂಗ ಮಹಾಸ್ವಾಮಿಗಳು, ಶಶಿಕುಮಾರ್ ದೇವರು, ಮೇಳಕುಂದ ಬಿ. ಮರಳಸಿದ್ದ ದೇವರು, ಜೋಗುರು , ಗ್ರಾಮದ ಮುಖಂಡರು, ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.


























