Home ಜಿಲ್ಲೆ ಕಲಬುರಗಿ ಗಾಂಜಾ ಮಾರಾಟ: ಓರ್ವನ ಬಂಧನ

ಗಾಂಜಾ ಮಾರಾಟ: ಓರ್ವನ ಬಂಧನ

ಕಲಬುರಗಿ,ಜೂ.10-ನಗರದ ರೈಲ್ವೆ ಸ್ಟೇಷನ್ ಮೇನ್ ಗೇಟ್‍ದಿಂದ ವಿ.ಜಿ.ಮಹಿಳಾ ವiಹಾವಿದ್ಯಾಲಯ ಕಡೆಗೆ ಹೋಗುವ ರಸ್ತೆಯ ಹಾಸ್ಟೆಲ್ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ರಾಜಕುಮಾರ, ಅರವಿಂದ, ಅಂಬಾಜಿ, ಪ್ರೀತಮ್, ನಾಗರಾಜ ಅವರು ದಾಳಿ ನಡೆಸದಿ ಬಡಾರೋಜಾದ ಸೈಯ್ಯದ್ ಗಲ್ಲಿಯ ಅಬ್ದುಲ್ ರಶೀದ್ ತಂದೆ ಶೇಖ್ ಚಾಂದಸಾಬ್ ಎಂಬಾತನನ್ನು ಬಂಧಿಸಿ 32 ಸಾವಿರ ರೂ.ಮೌಲ್ಯದ 320 ಗ್ರಾಂ.ಗಾಂಜಾ ಜಪ್ತಿ ಮಾಡಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.