Home ಜಿಲ್ಲೆ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ

ನವಲಗುಂದ,ಜು೧೪ : `ಪ್ರತಿಯೊಬ್ಬ ಅರ್ಹ ಮತದಾರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪರಿಪೂರ್ಣ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬೇಕು’ ಎಂದು ನವಲಗುಂದ ಮಂಡಲ ಬಿಜೆಪಿ ಅಧ್ಯಕ್ಷ ಗಂಗಪ್ಪ ಮನಮಿ ತಿಳಿಸಿದರು.

ಚಿಲಕವಾಡ ಗ್ರಾಮದ ಬೂತ್ ನಂಬರ್ ೧೧೭ ರಲ್ಲಿ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ಮಾತನಾಡಿದ ಅವರು `ಮತದಾರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಹತ್ತರ ಪ್ರಕ್ರಿಯೆಯಾಗಿದೆ’ ಎಂದರು.

ನವಲಗುAದ ಮತ ಕ್ಷೇತ್ರದ ಬಿಎಲ್ ಒ ಸಿದ್ದನಗೌಡ ಪಾಟೀಲ ಮಾತನಾಡಿ `ಬಿ.ಎಲ್.ಒಗಳು ನೀಡುವ ನಮೂನೆಯನ್ನು ಸರಿಯಾದ ಮಾಹಿತಿಯೊಂದಿಗೆ ತುಂಬಿ ತಮ್ಮ ಹಕ್ಕನ್ನು ದೃಢೀಕರಿಸಿಕೊಳ್ಳಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರು ಈ ಬಗ್ಗೆ ಮತದಾರರಿಗೆ ಮಾರ್ಗದರ್ಶನ ಮಾಡಿ ಸಹಕರಿಸಬೇಕು’ ಎಂದರು.

ಬಿಎಲ್ ಎ ೨ ಅಡಿವಪ್ಪ ಹುಬ್ಬಳ್ಳಿ, ಬೂತನ ಬಿಎಲ್ ಒ ಶಾಂತಾ ಹರಕುಣಿ, ಗಿರೀಶ ಹರಕುಣಿ, ರಾಮನಗೌಡ ಸಂಕನಗೌಡ್ರ ಇತರರು ಇದ್ದರು