Home ಜಿಲ್ಲೆ ಹಿಂದೂ ಮಹಾಗಣಪತಿಗೆ ಕಂದಕೂರ ಕುಟುಂಬದಿAದ ವಿಶೇಷ ಪೂಜೆ

ಹಿಂದೂ ಮಹಾಗಣಪತಿಗೆ ಕಂದಕೂರ ಕುಟುಂಬದಿAದ ವಿಶೇಷ ಪೂಜೆ

ಯಾದಗಿರಿ: ನಗರದ ಗ್ರಾಮೀಣ ಪೊಲೀಸ್ ಠಾಣೆ ಸಮೀಪದ ಜೈಭವಾನಿ ದೇವಸ್ಥಾನದ ಬಳಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮಂಟಪದಲ್ಲಿ ಶನಿವಾರ ಕಂದಕೂರ ಕುಟುಂಬದ ವತಿಯಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಸಕ ಶರಣಗೌಡ ಕಂದಕೂರ ಅವರ ಸಹೋದರ ಮಲ್ಲಿಕಾರ್ಜುನ ರೆಡ್ಡಿ ಕಂದಕೂರ (ರಾಜೂಗೌಡ), ರಾಜೇಂದ್ರರೆಡ್ಡಿ ಹಂಚಿನಾಳ ಸೇರಿದಂತೆ ಹಲವರು ಭಾಗವಹಿಸಿ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಡೆದ ಪ್ರಸಾದ ವಿತರಣೆ ಕಾರ್ಯಕ್ರಮದಲ್ಲಿ ಆಗಮಿಸಿದ್ದ ಭಕ್ತರಿಗೆ ಮಲ್ಲಿಕಾರ್ಜುನ ರೆಡ್ಡಿ ಕಂದಕೂರ ಅವರು ಸ್ವತಃ ಊಟ ಬಡಿಸುವ ಮೂಲಕ ಸೇವೆಯಲ್ಲಿ ಪಾಲ್ಗೊಂಡರು. ಈ ವೇಳೆ ಗಣೇಶ ಭಕ್ತರು ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.