ಸೇಡಂ,ಅ,26: ಮಾಧ್ಯಮಗಳು ಸರ್ಕಾರದ ಹಾಗೂ ಯಾವುದೇ ಪಕ್ಷಗಳ ಕೈಗೊಂಬೆಯಾಗಿ ಪ್ರಚಾರಕರಂತೆ ಕೆಲಸ ಮಾಡದೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ಮತ್ತು ಅನ್ಯಾಯಗಳನ್ನು ದಿಟ್ಟತನದಿಂದ ಪ್ರಶ್ನಿಸಿ ಸುದ್ದಿ ಮಾಡುವುದೇ ನಿಜವಾದ ಪತ್ರಿಕೋದ್ಯಮ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಧ್ಯಮಗಳು ಸದಾ ಸಾರ್ವಜನಿಕರ ಪರವಾಗಿ ಸತ್ಯದ ಪರವಾಗಿ ಧ್ವನಿ ಎತ್ತಬೇಕು ಎಂದರು. ಸಂಘದ ನೂತನ ತಾಲೂಕು ಅಧ್ಯಕ್ಷರಾಗಿ ವೆಂಕಟಪ್ಪ ಕೆ. ಸುಗ್ಗಲ್, ಉಪಾಧ್ಯಕ್ಷರಾಗಿ ದೇವರಾಜ್ ಊರಡಿ ಆಡಕಿ ಹಾಗೂ ಗುಂಡಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ಮೌನೇಶ್ ವಿಶ್ವಕರ್ಮ ಮತ್ತು ಖಜಾಂಚಿಯಾಗಿ ಮಾರುತಿ ಅವರನ್ನು ನೇಮಕಾತಿ ಆದೇಶ ಪ್ರತಿಯನ್ನು ರಾಜ್ಯಾಧ್ಯಕ್ಷರು ನೀಡಿ ಸನ್ಮಾನಿಸಿ ಗೌರವಿಸಿದರು ನಂತರ ಬಸ್ ಕಂಡಕ್ಟರ್ ಡ್ರೈವರ್ ಗಳಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರು. ಅಭಿನವ ಕಾರ್ತಿಕೇಶ್ವರ ಶ್ರೀಗಳು, ಹಾಲಪ್ಪಯ್ಯ ವಿರಕ್ತ ಮಠದ ಮ.ನಿ.ಪ್ರ ಶ್ರೀ ಪಂಚಾಕ್ಷರಿ ಸ್ವಾಮಿಗಳು, ಪರಮಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದರು, ಈ ವೇಳೆ ಜೈ ಭೀಮ್ ಊಡಗಿ,ಸಿದ್ದು ಬಾನರ, ಸೂರ್ಯನಾರಾಯಣ, ಗೀತಾ ಹೊಸಮನಿ, ಸುನೀಲ್ ರಾಣಿವಾಲ, ಸೇರಿದಂತೆ ಹಲವು ಇದ್ದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಲ್ಪಿಸುವಲ್ಲಿ ನಮ್ಮ ಸಂಘಟನೆ ಧ್ವನಿ ಎತ್ತಿ ಹೋರಾಟ ಮಾಡಿದ್ದು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮಾನ್ಯ ಶ್ರೀ ಸಿದ್ಧರಾಮಯ್ಯ ಮುಖ್ಯಮಂತ್ರಿಗಳಿದ್ದಾಗ ನಮ್ಮ ಹೋರಾಟಕ್ಕೆ ಸ್ಪಂದಿಸಿ ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಒದಗಿಸು ನ್ಯಾಯ ಒದಗಿಸಿದೆ.ಇನ್ನೂ ನಮ್ಮ ಹೋರಾಟ ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೆ ಆಗಬೇಕು ಎಂದು ಚಳಿಗಾಲದ ಅಧಿವೇಶನ ಸಮಯದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಹೋರಾಟ ಮಾಡಲಾಗುವುದು.
ಬಂಗ್ಲೆ ಮಲ್ಲಿಕಾರ್ಜುನ.
ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಬೆಂಗಳೂರು.
ಪತ್ರಕರ್ತರ ಹಕ್ಕುಗಳಿಗಾಗಿ ನಮ್ಮ ಸಂಘಟನೆ ಸದಾ ಧ್ವನಿ ಎತ್ತಲಿದೆ!
ಹಗಲಿರುಳು ಶ್ರಮಿಸುವ ಪತ್ರಕರ್ತರಿಗೆ ಸೂಕ್ತ ವಿಮೆ ಹಾಗೂ ಅಗತ್ಯ ಮೂಲಸೌಕರ್ಯಗಳು ದೊರೆಯದಿರುವುದು ದುರ್ದೈವದ ಸಂಗತಿ. ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ನಮ್ಮ ಸಂಘಟನೆ ಸದಾ ಧ್ವನಿ ಎತ್ತಲಿದೆ. ಪತ್ರಕರ್ತರು ಯಾರೇ ಆಗಿರಲಿ, ಅವರಿಗೆ ಯಾವುದೇ ರೀತಿಯ ತೊಂದರೆ ಎದುರಾದರೂ ಅವರ ಪರವಾಗಿ ನಿಂತು ನ್ಯಾಯ ದೊರಕಿಸಲು ನಮ್ಮ ಸಂಘಟನೆ ಬದ್ಧವಾಗಿದೆ.
ವೆಂಕಟಪ್ಪ ಕೆ ಸುಗ್ಗಾಲ್. ಅಧ್ಯಕ್ಷರು ಪತ್ರಕರ್ತ ಧ್ವನಿ ಸಂಘ ಸೇಡಂ
ಸಮಾಜದಲ್ಲಿ ಜಾತಿ ಮತ್ತು ಧರ್ಮ ತೋರಿಸದೆ ನೈಜ ಸುದ್ದಿಗಳನ್ನು ಮಾಡಿ ಸಮಾಜದ ಒಳಿತಿಗಾಗಿ ಶ್ರಮಿಸಬೇಕು.
ಮ.ನಿ.ಪ್ರ ಶ್ರೀ ಪಂಚಾಕ್ಷರಿ ಸ್ವಾಮಿಗಳು ಹಾಲಪ್ಪಯ್ಯ ವಿರಕ್ತಮಠ ಸೇಡಂ
ಪ್ರತಿಯೊಬ್ಬ ಪತ್ರಕರ್ತನು ತನ್ನಲ್ಲಿರುವ ತಪ್ಪು ಕಲ್ಪನೆ ಸ್ವತಹ ಅರಿತುಕೊಂಡು ಸರಿಪಡಿಸಿಕೊಂಡು ಸಮಾಜದಲ್ಲಿರುವಂತಹ ತಪ್ಪುಗಳನ್ನು ಸಮಾಜದ ಎದುರೇ ಪ್ರಶ್ನಾತೀರ್ಥವಾಗಿ ಸುದ್ದಿ ಇಡುವಂತಹ ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ಪತ್ರಕರ್ತನಾಗಿ ಗುರುತಿಸಬಲ್ಲನು ಅಂತಹ ಕೆಲಸವನ್ನು ಪ್ರತಿಯೊಬ್ಬ ನಿಷ್ಠಾವಂತ ಪತ್ರಕರ್ತರ ಕರ್ತವ್ಯ.
ಷ.ಬ್ರ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಳಖೇಡ



















