
ಚನ್ನಮ್ಮನ ಕಿತ್ತೂರು,ಆ.೩೦: ಸಾಮಾಜಿಕ ಮಾಧ್ಯಮವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ, ಇದರಿಂದ ದೂರವಿರುವುದು ಕಷ್ಟಕರವಾಗಿದ್ದು ಇದನ್ನು ಕಾನುನೂ ಚೌಕಟ್ಟಿನಲ್ಲಿ ವಿದ್ಯಾರ್ಥಿಗಳು ಬಳಿಸಿಕೊಂಡು ಮುನ್ನಡೆಯಬೇಕೆಂದು ಜೆಎಂಎಫ್‌ಸಿ ನ್ಯಾಯಾಧೀಶರಾದ ಮೊಹಮ್ಮದಲಿ ನಾಯಕ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಕಾನುನೂನಿನ ಅರಿವು-ನೆರವು ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳು ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು. ಜಗತ್ತಿನಲ್ಲಿ ದೊಡ್ಡದಾದ ಸಂವಿಧಾನ ನಮ್ಮದು ಎಂದರು.
ನ್ಯಾಯವಾದಿ ಸಂಘದ ಉಪಾಧ್ಯಕ್ಷ ಬಿ.ಬಿ.ಹಿರೇಮಠ ಮಾತನಾಡಿ ಸಮಾನತೆಯ ಹಕ್ಕು ಪ್ರತಿಯೊಬ್ಬ ಮನು?À್ಯನಿಗೂ ಇರುವ ಅತ್ಯಂತ ಮೂಲಭೂತ ಮತ್ತು ಪ್ರಮುಖ ಹಕ್ಕು. ಎಲ್ಲಾ ಜನರು ಕಾನೂನಿನ ಮುಂದೆ ಸಮಾನರು ಮತ್ತು ಜೀವನದಲ್ಲಿ ಒಂದೇ ರೀತಿಯ ಅವಕಾಶಗಳಿಗೆ ಅರ್ಹರು. ಭಾರತದ ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ಈ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ ಎಂದರು.
ನ್ಯಾಯವಾದಿಗಳಾದ ಡಿ.ಆಯ್. ಹವಾಲ್ದಾರ, ಬಿ.ಪಿ.ತಳವಾರ ವಿದ್ಯಾರ್ಥಿಗಳಿಗೆ ಮೂಲಭೂತಹಕ್ಕು ಕುರಿತು ಮಾತನಾಡಿದರು.
ಸಭೆಯಲ್ಲಿ ಪ್ರಭಾರಿ ಪ್ರೌಶುಂಪಾಲ ಸೋಮಪ್ಪ ಪಟ್ಟೇದ, ನ್ಯಾಯವಾದಿಗಳಾದ ಎಂ.ಎಸ್.ಹAಚಿನಮನಿ, ಎನ್.ಎ.ಮರೇದ, ಉಪನ್ಯಾಸಕ ಎ.ಎನ್.ವಾರದ ನಿರೂಪಿಸಿದರು. ಅನಿತಾ ದರಕೋಜಿ, ಸರೋಜಾ ತಿಗಡೊಳ್ಳಿ ಪಾಲ್ಗೊಂಡಿದ್ದರು.

































