Home ಜಿಲ್ಲೆ ಅಲಿಯಂಬರ ಗ್ರಾಮದಲ್ಲಿ ಎಸ್.ಐ.ಆರ್. ಜಾಗೃತಿ ಅಭಿಯಾನಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅರಿವು

ಅಲಿಯಂಬರ ಗ್ರಾಮದಲ್ಲಿ ಎಸ್.ಐ.ಆರ್. ಜಾಗೃತಿ ಅಭಿಯಾನಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಅರಿವು

ಬೀದರ್ , ಜು. 19: ತಾಲೂಕಿನ ಅಲಿಯಂಬರ ಗ್ರಾಮದಲ್ಲಿ ಮಂಗಲಾ ಮಹಿಳಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಶನಿವಾರ ಎಸ್.ಐ.ಆರ್. ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿ, ಗ್ರಾಮಸ್ಥರಲ್ಲಿ ಯೋಜನೆಯ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ಐ.ಆರ್. ಯೋಜನೆಯ ಉದ್ದೇಶ, ಅದರ ಪ್ರಯೋಜನಗಳು ಹಾಗೂ ಗ್ರಾಮೀಣ ಜನರು ಯೋಜನೆಯ ಸೌಲಭ್ಯಗಳನ್ನು ಹೇಗೆ ಪಡೆಯಬಹುದು ಎಂಬ ಕುರಿತು ಸಂಸ್ಥೆಯ ಅಧ್ಯಕ್ಷೆ ಕು.ಮಂಗಲಾ ಮರಕಲೆ ಅವರು ಸಮಗ್ರ ಮಾಹಿತಿ ನೀಡಿದರು..
ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಸಾರ್ವಜನಿಕರು ಜಾಗೃತರಾಗಬೇಕು ಎಂದು ಅವರು ತಿಳಿಸಿದರು.
ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎಂದು ಮಂಗಲಾ ಅಭಿಪ್ರಾಯಪಟ್ಟರು.
.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಅಲಿಯಂಬರ ಗ್ರಾಮದವರಾದ, ಮಹಾದೇವಿ ಶಿವಶಟ್ಟೆ, ಶ್ರೀದೇವಿ ಕಪಲಾಪುರೆ, ಸಂತೋಷ ಮುದ್ದಾಳೆ, ರವಿ ಮುದ್ದಾಳೆ, ಸುರೇಶ ಮಾಳೆ, ಸಿದ್ದಪ್ಪ ಮೈಲುರೆ, ರಿಯಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಂತಿಮವಾಗಿ ಸಂಸ್ಥೆಯ ವತಿಯಿಂದ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು.