
ಸಿಂದಗಿ: ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ೧೯೯೯ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಹುತಾತ್ಮರಾದ ಭಾರತೀಯ ವೀರರ ಸ್ಮರಣಾರ್ಥ ಈ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಸೈನಿಕರು ತಮ್ಮ ತ್ಯಾಗ ಬಲಿದಾನದಿಂದ ದೇಶದ ರಕ್ಷಣೆಯಲ್ಲಿ ಮಹತ್ವದ. ಪಾತ್ರ ವಹಿಸಿದರು. ಈ ನೆನಪಿನಲ್ಲಿ ಥೈರೋಕೇರ್ ಪ್ರಾಂಚೈಸಿಯು ರಿಯಾಯತಿಯಲ್ಲಿ ಆರೋಗ್ಯ ಮತ್ತು ರಕ್ತ ತಪಾಸಣೆ ಮಾಡುತ್ತದೆ. ಸಾರ್ವಜನಿಕರು ಲಾಭ ಪಡೆಯಬೇಕು ಎಂದು ಸಿಂದಗಿ ತಾಲೂಕ ಗ್ಯಾರಂಟಿ ಯೋಜನೆಯ ಸದಸ್ಯ ರಜಾಕ್ ತಾಂಬೆ ಹೇಳಿದರು.
ಅವರು ಸಿಂದಗಿಯ ಸಾಯಿ ರಕ್ತ ತಪಾಸಣಾ ಕೇಂದ್ರವು ಆಯೋಜಿ ಸಿದ್ದ ಕಾರ್ಗಿಲ್ ವಿಜಯೋತ್ಸವದ ನಿಮಿತ್ಯ ಮಾಜಿ ಸೈನಿಕರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮತ್ತೊಬ್ಬ ಮುಖ್ಯ ಅತಿಥಿ ಜೇವರ್ಗಿ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಖಾಜಾವಲಿ ಈಚನಾಳ ಮಾತನಾಡಿ ದೇಶವು ಸುಭದ್ರ ಮತ್ತು ಸುರಕ್ಷಿತ ವಾಗಿ ಇರಬೇಕಾದರೆ ಸೈನಿಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಅದಕ್ಕಾಗಿಯೇ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜಿ ಯವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳಿ ಸೈನಿಕರಿಗೆ ಮತ್ತು ರೈತರಿಗೆ ಪ್ರಾಶಸ್ತ ನೀಡಿದ್ದರು. ಸಾಯಿ ಲ್ಯಾಬ್ ಥೈರೋಕೇರ್ ಪ್ರಾಂಚೆಸಿಯು ಮಾಜಿ ಸೈನಿಕರನ್ನು ಗುರುತಿಸಿ ಅವರನ್ನು ಸನ್ಮಾನ ಮಾಡಿದ ಕಾರ್ಯ ಬಹಳ ಸ್ತುತ್ಯಾರ್ಹವಾದದ್ದು ಎಂದು ಶ್ಲ್ಯಾಘಿಸಿದರು. ಸಾಯಿ ಲ್ಯಾಬ್ ಮುಖ್ಯಸ್ಥರ ಈ ಕಾರ್ಯವನ್ನು ಅಭಿನಂದಿಸಿದರು. ಮಾಜಿ ಸೈನಿಕರಾದ ಸಿದ್ದರಾಮ ಹೊರಕೇರಿ ಮತ್ತು ಉದಯ್ ಕುಮಾರ್ ಬಗಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಶಬ್ಬೀರ್ ಪಟೇಲ್, ಸಿಂದಗಿ ತಾಲೂಕ ಮಾಜಿ ಸೆ?ನಿಕರ ಸಂಘದ ಅಧ್ಯಕ್ಷ ರವೀಂದ್ರ ಬಿರಾದಾರ್, ಪ್ರಧಾನ ಕಾರ್ಯದರ್ಶಿ ಹನುಮಂತ್ರಾಯ ಬಿರಾದಾರ, ಖಜಾಂಚಿ ಸಿದ್ದರಾಮ, ಅಪ್ಪಸಾಹೇಬ್ ಬೇವಿನಮಟ್ಟಿ, ಮಲ್ಲಿಕಾರ್ಜುನ ಬಿರಾದಾರ, ಉದಯ್ ಕುಮಾರ್ ಬಗಲಿ, ಜಗದೀಶ್ ಶಿವಣಗಿ, ಅಣ್ಣಾರಾಯ ವಾಲೀಕಾರ್, ಈರಣ್ಣ ತಳವಾರ್ ಈ ಎಲ್ಲ ಮಾಜಿ ಸೈನಿಕರನ್ನು ಡಾ. ಅರುಣ ಆವುಟಿ ಶಾಲು ಹಾರ ಹಾಕಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಾಯಿ ರಕ್ತ ತಪಾಸಣಾ ಕೇಂದ್ರದ ಮುಖ್ಯಸ್ಥರಾದ ಬಸೀರ್ ಅಹ್ಮದ್ ಅತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಸಾಯಿ ಲ್ಯಾಬಿನ ಸಿಬ್ಬಂದಿಗಳಾದ ಅಬ್ದುಲ್, ಆದಮ್, ಅಬ್ಬಾಸ್, ರೆಹಾನ್, ಆಯೇಶಾ, ಶರಣಗೌಡ, ಸಾಹಿಲ್, ಸಾಧಿಕ್, ಅಭಿಜಿತ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.































