
ಕಲಬುರಗಿ,ಜೂ 18: ಒಂದು ರಾಜ್ಯ ಒಂದು ಚುನಾವಣೆ,ಚುನಾವಣೆ ವ್ಯವಸ್ಥೆ ಸುಧಾರಿಸಿ,ಭ್ರಷ್ಟಾಚಾರ ನಿಯಂತ್ರಿಸಿ,ದೇಶ ಉಳಿಸಿ ಹಾಗೂ ಚುನಾವಣೆಗಳಲ್ಲಿ ಹಣಬಲ ನಿಯಂತ್ರಿಸಿ ಪ್ರಜಾಪ್ರಭುತ್ವ ಉಳಿಸಿ ಮೊದಲಾದ 21 ಅಂಶಗಳ ಚುನಾವಣೆವ್ಯವಸ್ಥೆ ಸುಧಾರಣೆಗಳ ಬೇಡಿಕೆ ಮುಂದಿಟ್ಟುಕೊಂಡು ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಅಧ್ಯಕ್ಷ ರಮೇಶ ದುತ್ತರಗಿ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ನಗರದ ಮಹಾನಗರ ಪಾಲಿಕೆ ಆವರಣದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಮೌನ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕಳೆದ 19-08-2023 ರಿಂದ ಈ ಮೌನ ಸತ್ಯಾಗ್ರಹ ಆರಂಭಿಸಿದ್ದು ಈ 1000 ನೇ ದಿನ ತಲುಪಿದೆ.ಇನ್ನು ಮುಂದೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಅನಿರ್ದಿಷ್ಟಾವಧಿವರೆಗೆ ಮೌನ ಸತ್ಯಾಗ್ರಹ ನಡೆಸಲಾಗುವದು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ರಮೇಶ ದುತ್ತರಗಿ ತಿಳಿಸಿದ್ದಾರೆ


























