Home ಜಿಲ್ಲೆ ಬೆಂಗಳೂರು ಶ್ಯಾಮ್ ಪ್ರಸಾದ್ ಧೀಮಂತ ನಾಯಕ

ಶ್ಯಾಮ್ ಪ್ರಸಾದ್ ಧೀಮಂತ ನಾಯಕ

Oplus_16908288

ಕೆ.ಆರ್.ಪುರ,ಜೂ.೨೪-ಬಿಜೆಪಿ ಪಕ್ಷ ವಿಶ್ವದಲ್ಲೆ ಅತಿಹೆಚ್ಚು ಸದಸ್ಯತ್ವ ಹೊಂದಲು ಭದ್ರ ಬುನಾದಿ ಹಾಕಿದವರು ಧೀಮಂತ ನಾಯಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಎಂದು ಕೆ.ಆರ್.ಪುರ ಕ್ಷೇತ್ರದ ಅಧ್ಯಕ್ಷ ಮುನೇಗೌಡ ಅವರು ತಿಳಿಸಿದರು.


ಕ್ಷೇತ್ರದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಅಂಗವಾಗಿ ಅವ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.


೧೯೫೧ ರಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದ ಅವರು ಮುಂದೆ ಭಾರತೀಯ ಜನತಾ ಪಕ್ಷ ಹೆಮ್ಮರವಾಗಿ ಬೆಳೆಯಲು ಕಾರಣರಾಗಿದ್ದಾರೆ ಎಂದು ನುಡಿದರು.


ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ರಾಜಕೀಯ ಪಂಡಿತ, ನ್ಯಾಯವಾದಿ ಮತ್ತು ಶಿಕ್ಷಣತಜ್ಞರಾಗಿದ್ದು ನಮ್ಮ ದೇಶದ ಸರ್ವತೋಮುಖ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಮಾಡಿದ ಕಾರ್ಯಗಳು ಸ್ಮರಣೀಯ ಎಂದು ನುಡಿದರು.


ಬಿಜೆಪಿ ಪಕ್ಷ ದೇಶದಲ್ಲಿ ಉತ್ತಮ ಆಡಳಿತ ನೀಡಲು ಇವರು ನೀಡಿರುವ ಕೊಡುಗೆ ಮೂಲ ಕಾರಣವಾಗಿದೆ,ಇದರಿಂದಾಗಿಯೇ ನಮ್ಮ ದೇಶ ವಿಶ್ವಗರು ಆಗಲು ಸಾದ್ಯವಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಲೋಕೆಶ್,ಉಪಾಧ್ಯಕ್ಷ ಗಂಗಧರ್, ಮಹಿಳಾ ಅಧ್ಯಕ್ಷೆ ಗೌರಮ್ಮ,ಯುವ ಮೋರ್ಚಾ ಅಧ್ಯಕ್ಷ ಗೋವಿಂದ್ ಯಾದವ್,ವಾರ್ಡನ ಅಧ್ಯಕ್ಷ ಸತೀಶ್,ಮುಖಂಡರಾದ ಧನಕುಮಾರ್, ದೇವರಾಜ,ರವಿ, ಜಗದೀಶ್ ಗೌಡ,ಮುರಳಿ, ಜಯಂತಿ, ಕಿಶನ್, ಸಂಪತ್ ಇದ್ದರು.