Home ಜಿಲ್ಲೆ ಬೆಂಗಳೂರು ಸ್ವಚ್ಛ ಪರಿಸರಕ್ಕಾಗಿ ಸ್ವಚ್ಚತಾ ಅಭಿಯಾನ

ಸ್ವಚ್ಛ ಪರಿಸರಕ್ಕಾಗಿ ಸ್ವಚ್ಚತಾ ಅಭಿಯಾನ

ಕೆ.ಆರ್.ಪುರ,ಜೂ.೨೪- ಸ್ವಚ್ಛ ಪರಿಸರ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಬಾಬುಸಾಪಾಳ್ಯ ವಾರ್ಡನ ದಿವ್ಯಶಿವಕುಮಾರ್ ಗೌಡ ಅವರ ನೇತೃತ್ವದ ತಂಡ ಕೋಕನೇಟ್ ಗ್ರೋ ಲೇಔಟ್‌ನಲ್ಲಿ ತಂಡ ಸ್ವಚ್ಚತಾ ಅಭಿಯಾನ ನಡೆಸಿದರು.


ಕಸದ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸುತ್ತಿರುವ ತಂಡ ಪ್ರದೇಶವನ್ನು ಸ್ವಚ್ಛಗೊಳಿಸಿ, ಮೇಶ್ ಅವಳವಡಿಸುವ ಮೂಲಕ ಶಾಶ್ವತ ಕ್ರಮಕ್ಕೆ ಮುಂದಾಗಿದೆ.


ಕಾರ್ಯಕ್ರಮದಲ್ಲಿ ಮಾತನಾಡಿದ ಬಾಬುಸಾಪಾಳ್ಯದ ವಾರ್ಡನ ಜಿಬಿಎ ಆಕಾಂಕ್ಷಿ ದಿವ್ಯಶಿವಕುಮಾರ್ ಗೌಡ ಅವರು ನಮ್ಮ ಮನೆ ನಮ್ಮ ಬಡಾವಣೆ ಸ್ವಚ್ಛತಾ ಆಂದೋಲನ ಅಡಿ ಸ್ವಯಂಪ್ರೇರಿತವಾಗಿ ಸ್ವಚ್ಚಾತಾ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.


ಡೆಂಗ್ಯೂ,ಮಲೆರೀಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಲಾಗುತ್ತಿದ್ದು,ಖಾಲಿ ನಿವೇಶಗಳ ಸ್ವಚ್ಚತೆ ಸಹ ಮಾಡಲಾಗುತ್ತಿದೆ ಎಂದು ಹೇಳಿದರು.
ಇದರಿಂದ ನಮ್ಮ ತಂಡದ ಮೂಲಕ ವಾರದಲ್ಲಿ ಎರಡು ದಿನ ಅಭಿಯಾನ ನಡೆಸುವ ಮೂಲಕ ಸ್ವಚ್ಛ ಬಾಬುಸಾಪಾಳ್ಯ ವಾರ್ಡ ಮಾಡುತ್ತೆವೆ,ಅಲ್ಲದೆ ಸಮಾಜಿಕ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.


ನಮ್ಮ ವಾರ್ಡ ಸ್ವಚ್ಛವಾರ್ಡ ಅಭಿಯಾನದ ಅಡಿ ಸ್ವಚ್ಚತಾ ಅಭಿಯಾನ ನಡೆಸಲಾಗುತ್ತಿದ್ದು,ವಾರ್ಡನ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುವುದಾಗಿ ಭರವಸೆ ನೀಡಿದರು.