
ಧಾರವಾಡ,ಜು.೧೨: ಇಲ್ಲಿನ ನೌಕರರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಪಟ್ಟಾ ಜಮೀನು ಕ್ರಷರ್ ಹಾಗೂ ಗಣಿ ಮಾಲೀಕರ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಿವಾನಂದ ಉಳ್ಳೇಗಡ್ಡಿ, ಉಪಾಧ್ಯಕ್ಷರಾಗಿ ವಿನಯ ನೀಲ್‌ರೆಡ್ಡಿ, ಗೌರವಾಧ್ಯಕ್ಷರಾಗಿ ಗಿರೀಶ ಮಲ್ನಾಡ್, ಕಾರ್ಯದರ್ಶಿಯಾಗಿ ನಂದೀಶ ತಾಳೂರು, ಖಜಾಂಚಿಯಾಗಿ ಉಮಾಕಾಂತ ಮೆಹರವಾಡೆ, ಕಾನೂನು ಸಲಹೆಗಾರರಾಗಿ ವಿಕಾಸ ಮರಕುಂಬಿ, ಆಡಳಿತ ಮಂಡಳಿ ಸದಸ್ಯರಾಗಿ ಮನೋಹರ್ ಯಾದವ, ರಾಜು ಪಾಟೀಲ, ಶಿವರುದ್ರ ಗೋಕುಲ, ವಜ್ರಮುನಿ ಶಿರಕೋಳ, ವೀರನಗೌಡ ಪಾಟೀಲ, ಶಿವಾನಂದ ಗಾಮನಗಟ್ಟಿ, ದೀಪಕ ಪವಾರ, ಸಂಜೀವ ತುರಮರಿ ಆಯ್ಕೆಯಾದರು. ಎಲ್ಲ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ರಾಜ್ಯ ಅಧ್ಯಕ್ಷ ವಿ.ಎಸ್. ಪಾಟೀಲ ಆಗಮಿಸಿದ್ದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕಲ್ಲುಗಣಿ ಹಾಗೂ ಕ್ರಷರ್‌ಗಳ ಮೇಲೆ ಲಕ್ಷಾಂತರ ರೂ. ದಂಡ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಲಾಯಿತು. ಎಲ್ಲ ಕ್ರಷರ್ ಮಾಲೀಕರು ವಾಹನ ಪರವಾನಿಗೆ ಪಡೆದ ಮಿತಿಯಲ್ಲಿಯೇ ಕಡಿ ಸಾಗಾಟ ಮಾಡಲು ಮತ್ತು ಅಷ್ಟೇ ರಾಜಧನ ಪರ್ಮಿಟ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಲಘಟಗಿ ಧಾರವಾಡ- ಹುಬ್ಬಳ್ಳಿ, ಅಣ್ಣಿಗೇರಿ ಎಲ್ಲ ಕ್ರಷರ್ ಮಾಲೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು.































