
ಹುಬ್ಬಳ್ಳಿ,ಜು.೨: ಸೃಜನ್ ಅಸುಂಡಿ ಅವರು ಐಐಟಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಎಲೆಕ್ಟಾçನಿಕ್ ಮೀಡಿಯಾ ಜರ್ನಲಿಸ್ಟ್÷್ಸ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಇವರು ನ್ಯೂಸ್ ೧೮ ಕನ್ನಡ ಹಿರಿಯ ವರದಿಗಾರ ಶಿವರಾಮ ಅಸುಂಡಿ ಅವರ ಪುತ್ರರಾಗಿದ್ದು, ಐಐಟಿ ಜೋಧಪುರದ ಏರೋಸ್ಪೇಸ್ ವಿಭಾಗಕ್ಕೆ ಸೃಜನ್ ಆಯ್ಕೆಯಾಗಿದ್ದು, ಆತನಿಗೆ ಮತ್ತು ಪೋಷಕರಿಗೆ ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ನೂಲ್ವಿ, ಉಪಾಧ್ಯಕ್ಷರಾದ ಗುರುರಾಜ ಹೂಗಾರ, ಕಲ್ಮೇಶ ಮಂಡ್ಯಾಳ, ಕಾರ್ಯದರ್ಶಿಗಳಾದ ಯಲ್ಲಪ್ಪ ಸೋಲಾರಗೊಪ್ಪ, ಸಂತೋಷ ಅರಳಿ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ನೂಲ್ವಿ, ಐಐಟಿ ಅನ್ನೋದು ಅತ್ಯುನ್ನತವಾದ ಸಂಸ್ಥೆ. ಸತತ ಪರಿಶ್ರಮದ ಫಲವಾಗಿ ಸೃಜನ್ ಐಐಟಿ ಗೆ ಆಯ್ಕೆಯಾಗಿದ್ದಾನೆ. ಏರೋಸ್ಪೇಸ್ ಮಾಡಿದವರಿಗೆ ಇಸ್ರೋ ಸೇರಿ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಮತ್ತು ಖಾಸಿಯಾಗಿಯೂ ವಿಪುಲ ಅವಕಾಶಗಳಿವೆ. ಸೃಜನ್ ದೊಡ್ಡ ಮಟ್ಟದಲ್ಲಿ ಬೆಳೆದು ಕೀರ್ತಿ ತರಲಿ ಎಂದರು. ಇದೇ ವೇಳೆ ಮಾತನಾಡಿದ ಗುರುರಾಜ ಹೂಗಾರ, ಪತ್ರಕರ್ತರ ಮಕ್ಕಳು ಎತ್ತರೆತ್ತರಕ್ಕೆ ಬೆಳೆಯಬೇಕು. ಸೃಜನ್ ತನ್ನ ಪ್ರತಿಭೆ ಮೂಲಕ ಐಐಟಿಗೆ ಆಯ್ಕೆಯಾಗಿದ್ದಾನೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸಂಜಯ್ ಚಿಕ್ಕಮಠ, ಪ್ರಕಾಶ ಹಿರೇಮಠ, ವಿನೋದ ಇಚ್ಛಂಗಿ, ಶಿವಾಜಿ ಲಾತೂರಕರ, ಈಶ್ವರ ಮನಗುಂಡಿ, ಆನಂದ ಪತ್ತಾರ, ಪ್ರಕಾಶ್ ಮುಳ್ಳೋಳ್ಳಿ, ಪಾಂಡುರAಗ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು.






























