
ಲಕ್ಷೆ÷್ಮÃಶ್ವರ,ಜು೧೧: ಪಟ್ಟಣದ ಸಿಬಿಎಸ್‌ಇ ಸ್ಕೂಲ್ ಚಂದನದಲ್ಲಿ ನಿನ್ನೆ ೨೦೨೬ ೨೭ ನೇ ಸಾಲಿನ ಶಾಲಾ ಚಟುವಟಿಕೆಗಳಿಗಾಗಿ ಸಂಸತ್ತಿನ ರಚನೆಗಾಗಿ ಮತದಾನ ಪ್ರಕ್ರಿಯೆ ಜರುಗಿತು.
ವಿದ್ಯಾರ್ಥಿಗಳಿಗೆ ದೇಶದ ಆಡಳಿತ ವ್ಯವಸ್ಥೆ ಯಾವ ರೀತಿ ನಡೆಯುತ್ತದೆ ಎಂಬ ನಿಟ್ಟಿನಲ್ಲಿ ಪರಿಕಲ್ಪನೆ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳು ಎತ್ತಿ ಹಿಡಿಯಲು ಮತ್ತು ಸಂವಿಧಾನದ ಆಶೋತ್ತರಗಳಿಗೆ ಸ್ಪಂದಿಸಲು ಎಲ್ಲರಿಗೂ ಸಂವಿಧಾನ ಮತದಾನದ ಹಕ್ಕನ್ನು ನೀಡಿದ್ದು ಮತದಾನ ಮಾಡುವ ಮೂಲಕ ಸೂಕ್ತ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲು ಇದೊಂದು ಪ್ರಬಲ ಅಸ್ತç ಎಂದು ಸಂಸ್ಥಾಪಕ ಟಿ ಈಶ್ವರ್ ಹೇಳಿದರು.
ಮೊದಲು ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ನಂತರ ಪರಿಶೀಲನೆ ಮಾಡಿ ಮತದಾನಕ್ಕೆ ಹಾನಿಗೊಳಿಸಲಾಯಿತು ಮತದಾನ ಪೂರ್ವದಲ್ಲಿ ಬೆರಳಿಗೆ ಶಾಯಿ ಹಚ್ಚುವ ಮೂಲಕ ಚಾಲನೆ ನೀಡಲಾಯಿತು.
ನಂತರ ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರನ್ನು ಪ್ರಕಟಿಸಲಾಯಿತು , ಶಾಲಾ ಸಂಸತ್ತಿಗೆ ಪ್ರಿಯಾಂಕ ಸಿಎಲ್ ಕ್ಯಾಪ್ಟನ್ ಆಗಿ ಆರ್ಯನ ಬಾಬು ಎಲ್ ರೆಗುಲೇಟರ್ ಆಗಿ ಆಯ್ಕೆಯಾದವರು ಎಂದು ಚುನಾವಣಾ ಅಧಿಕಾರಿಯಾಗಿದ್ದ ಪ್ರಾಚಾರ್ಯ ರಾಮು ಭಾವನವರ್ ಪ್ರಕಟಿಸಿದರು ಚುನಾವಣಾ ಸಿಬ್ಬಂದಿಯಾಗಿ ಶಿಕ್ಷಕರು ಪಾಲ್ಗೊಂಡಿದ್ದರು.































