ಶಾಲಾ ಪ್ರಾರಂಭೋತ್ಸವ

ಧಾರವಾಡ,ಮೇ31: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಸರಸ್ವತಿದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಶ್ರೀಮತಿ.ಭುವನೇಶ್ವರಿ ದಂಡಿನ ಮತ್ತು ಕಛೇರಿ ಅಧೀಕ್ಷಕರಾದ ಶಿವಲಿಂಗ ನೀಲಗುಂದ ಎಲ್ಲ ವಿದ್ಯಾರ್ಥಿಗಳಿಗೆ ಕರೋನಾ ರೋಗದ ಬಗ್ಗೆ ಕೈಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಹೇಳಿದರು. ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮದುವೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವಾಗ ಕಡ್ಡಾಯವಾಗಿ ಮುಖಕವಚವನ್ನು ಧರಿಸುವಂತೆ ಎಚ್ಚರಿಸಿದರು.

ಶಿಕ್ಷಕಿಯರಾದ ಶ್ರೀಮತಿ.ಸಾವಿತ್ರಿ ಪಾಟೀಲ, ಶ್ರೀಮತಿ ಮಂಜುಳಾ ಬಾವಿಹಾಳ, ಶ್ರೀಮತಿ.ಮಂಜುಳಾ ಹನಸಿ, ಶ್ರೀಮತಿ.ಶಶಿಕಲಾ ಹಿರೇಮಠ, ಕುಮಾರಿ ಅನುಶ್ರೀ ಚವಳಗಿ, ಶಿಕ್ಷಕೇತರ ಸಿಬ್ಬಂದಿಗಳಾದ ಶ್ರೀಮತಿ.ಸುನಿತಾ ಚಿನ್ನದಕೈ, ಶ್ರೀಮತಿ ರೇಣುಕಾ ಹೆಬ್ಬಳ್ಳಿ, ಕುಮಾರ ಮಹಾಂತೇಶ ಕ್ವಾಟಿ, ಕುಮಾರ ರಾಘವೇಂದ್ರ ಗುಡೆಣ್ಣವರ, ಕುಮಾರ ಮುತ್ತು ಅಮರಗೋಳ ಮತ್ತು ಸೋಮಶೇಖರ ಕರಡಿಗುಡ್ಡ ಎಲ್ಲರು ಸೇರಿ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವಿನೊಂದಿಗೆ ಪೆನ್ನು, ಮಾಸ್ಕ ಮತ್ತು ಸಿಹಿ ತಿನಿಸನ್ನು ವಿತರಣೆ ಮಾಡಿದರು.