Home ಜಿಲ್ಲೆ ಜ್ಞಾನ ಕೊಡುವ ಸಾತ್ವಿಕ ಪುರಾಣ ಭಾಗವತ

ಜ್ಞಾನ ಕೊಡುವ ಸಾತ್ವಿಕ ಪುರಾಣ ಭಾಗವತ

ಸತ್ತೂರು,ಜೂ೧: ಭಾಗವತ ೧೨ ಸ್ಕಂದಗಳಿAದ,೧೮,೦೦೦ ಶ್ಲೋಕಗಳಿಂದ ಯುಕ್ತನಾದ ಈ ಗ್ರಂಥ, ದೇವರ ಬಗ್ಗೆ ಸರಿಯಾದ ಜ್ಞಾನ ಕೊಡುವ ಸಾತ್ವಿಕ ಪುರಾಣ. ಈ ಲೋಕದ ಅಶಾಶ್ವತೆಯನ್ನು ತಿಳಿಸಿ, ವೈರಾಗದತ್ತ ನಮ್ಮನ್ನೆಲ್ಲ ಕರೆದೊಯ್ಯುತ್ತದೆ, ಪರಮಾತ್ಮನಲ್ಲಿ ಭಕ್ತಿ ಸ್ಥಿರವಾಗಿ ನಿಲ್ಲುತ್ತದೆ ಎಂದು ಡಾ. ಭೀಮಸೇನಾಚಾರ್ಯ ಮಳಗಿಯವರು ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಅಧಿಕ ಮಾಸದಲ್ಲಿ, ಎರಡನೇ ಭಾಗವತ ಸಪ್ತಾಹದ ಮಂಗಳೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಾ, ಶ್ರೀ ವೇದವ್ಯಾಸ ದೇವರಿಂದ ರಚಿತವಾದ ಈ ಭಾಗವತ, ರಚನೆಯ ಕ್ರಮದಲ್ಲಿಯೂ ಕೊನೆಯ ಪುರಾಣವಾಗಿದ್ದು, ಸಮಸ್ತ ಜೀವ ರಾಶಿಗಳಿಗೆ ಭಗವಂತನ ಬಗ್ಗೆ ತಿಳಿಸಿಕೊಡುವ, ಸುಂದರವಾಗಿ ನಿರೂಪಿಸುವ ಹಾಗೂ ಎಲ್ಲ ಪುರಾಣಗಳ ಸಾರ ಸಂಗ್ರಹವು ಇದ್ದ ಕಾರಣ, ಪುರಾಣಗಳ ರಾಜ ಶ್ರೀಮದ್ ಭಾಗವತ ಎಂದು ಹೇಳಲ್ಪಟ್ಟಿದೆ. ಈ ಗ್ರಂಥದ ಪಾರಾಯಣ, ಶ್ರವಣ, ಮನನ ಮುಂತಾದವುಗಳಿAದ ಶ್ರೀ ಹರಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲವೆAದು, ಲೌಕಿಕ ಉದಾಹರಣೆಗಳೊಂದಿಗೆ ಸ್ವಾರಸ್ಯಕರವಾಗಿ ತಿಳಿಸಿಕೊಟ್ಟರು.

ಈ ಕಾರ್ಯಕ್ರಮದ ಪೂರ್ವದಲ್ಲಿ ಬಳಗದ ಸದಸ್ಯರಿಂದ ಶ್ರೀ ಹರಿ ವಾಯು ಗುರುಗಳ ಸ್ತೋತ್ರಗಳ ಪಾರಾಯಣ ಮತ್ತು ನಾರಾಯಣಿ ಭಜನಾ ಮಂಡಳಿ ಅವರಿಂದ ೩೩ ತಾರತಮ್ಯ ದೇವರನಾಮಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಕೃಷ್ಣ ಹುನಗುಂದ, ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಾ. ಶ್ರೀನಾಥ, ಗಿರೀಶ್ ಶಿರೋಳ, ಡಾ. ರವಿ ದುಮ್ಮವಾಡ, ವಿಠಲ ಅಂಬೇಕರ, ಎಸ್. ವಿ. ಪಟ್ಟಣಕೋಡಿ ,ಸಂಜೀವ ಗೋಳಸಂಗಿ, ಪಾಂಡುರAಗ ಕುಲಕರ್ಣಿ,ಎಲ್ .ವಿ. ಜೋಶಿ, ವೆಂಕಟೇಶ ಶಿರೋಳ, ಹನುಮಂತ ಪುರಾಣಿಕ, ವಿಲಾಸ ಸಬನೀಸ, ವಿನಾಯಕ ಗುರುನಾಥ ಸರ್ದೇಶ್ಮುಖ, ಸಂಜೀವ್ ಜೋಶಿ, ವಿಶ್ವನಾಥ ಕೆ, ಕೇಶವ ಕುಲಕರ್ಣಿ, ಡಿಕೆ ಜೋಶಿ, ಪ್ರಕಾಶ ದೇಸಾಯಿ, ಆನಂದ ದೇಶಪಾಂಡೆ, ಬಹದ್ದೂರ ದೇಸಾಯಿ, ಅನಿಲ ದೇಶಪಾಂಡೆ, ನಾಗೇಶ ನರಸಾಪುರ, ಬದ್ರಿನಾಥ ಬೆಟಿಗೇರಿ ಮುಂತಾದವರು ಉಪಸ್ಥಿತರಿದ್ದರು.