ಕಲಬುರಗಿ: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕನ್ನಡ ಫಿಲಂ ಚೇಂಬರ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಮಾರಂಭದಲ್ಲಿ ಶಹಬಾದ ತಾಲೂಕಿನ ತರ್ಕಸ್ಪೇಟ್ ಎರಡನೇ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ಸಾಬಮ್ಮ ಎಂ ಕಾಳಗಿ ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಫಿಲಂ ಚೇಂಬರ್ ಅಧ್ಯಕ್ಷರಾದ ಡಾ. ಎಂ.ಎಸ್. ರವೀಂದ್ರ, ಗೌರವಾಧ್ಯಕ್ಷ ಡಾ. ಜಗನ್ನಾಥ್ ಶೆಟ್ಟಿ, ಉಪಾಧ್ಯಕ್ಷ ಡಾ. ಎನ್.ಎನ್. ಪ್ರಹ್ಲಾದ್, ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ ಎನ್, ಖಜಾಂಚಿ ಅರ್ಯನ್ ರೆಡ್ಡಪ್ಪ ಎಂ.ಆರ್, ವೇದಮೂರ್ತಿ ಡಾ.(ಸ್ವಾಮಿಗಳು), ಮದರ ಶೆಟ್ಟಿ ಹಾರಾಡಿ ಹಾಗೂ ಕುಟುಂಬದವರಾದ ಸ್ವಾತಾ ಎಸ್. ಕಾಳಗಿ, ಸ್ವಾತಿ ಎಂ. ಕಾಳಗಿ ಹಾಗೂ ಇತರರು ಭಾಗವಹಿಸಿ ಅಭಿನಂದಿಸಿದರು.





















