Home ಜಿಲ್ಲೆ ವೆಂಕಟರಾಮ್ ಕಟ್ಟಿಗೆ ಎಸ್.ಎನ್.ಶಾ ಪ್ರಶಸ್ತಿ

ವೆಂಕಟರಾಮ್ ಕಟ್ಟಿಗೆ ಎಸ್.ಎನ್.ಶಾ ಪ್ರಶಸ್ತಿ

ಬೆಂಗಳೂರು,ಜು೫: ಕಣ್ಣಿನ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಜಯಪ್ರಿಯ ಮೆಡಿಕಲ್ ಫೌಂಡೇಶನ್ ಡಾ. ವೆಂಕಟರಾಮ್ ಕಟ್ಟಿ ಅವರಿಗೆ ಬೆಂಗಳೂರಿನ ಶಂಕರ ಐ ಆಸ್ಪತ್ರೆಯಲ್ಲಿ ನಡೆದ ವಿಷನ್ – ೨೦೨೦ ರಾಷ್ಟಿçÃಯ ಸಮ್ಮೇಳನದಲ್ಲಿ ಪ್ರತಿಷ್ಠಿತ ಎಸ್.ಎನ್. ಶಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷ ಆದ್ಯತೆ ನೀಡಿ ಸಮಾನ, ಸಮಗ್ರ ಮತ್ತು ಗುಣಮಟ್ಟದ ಕಣ್ಣಿನ ಆರೈಕೆ ಸೇವೆಗಳನ್ನು ತಲುಪಿಸಿದ ಫೌಂಡೇಶನ್‌ನ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಹಿಂದುಳಿದ ಸಮುದಾಯಗಳಿಗೆ ಕೈಗೆಟುಕುವ ದರದಲ್ಲಿ ಕಣ್ಣಿನ ಚಿಕಿತ್ಸೆ, ತಪ್ಪಿಸಬಹುದಾದ ಕುರುಡುತನ ನಿರ್ಮೂಲನೆಗೆ ಕಾರ್ಯಕ್ರಮಗಳು, ಕರುಣೆಯಿಂದ ಕೂಡಿದ ಸೇವಾ ಬದ್ಧತೆ ಮತ್ತು ಸಾಮಾಜಿಕ ಜವಾಬ್ದಾರಿ, ಸಮಗ್ರ ಆರೋಗ್ಯ ಸೇವೆ ಮೂಲಕ ಸಮಾಜಕ್ಕೆ ಸೇವೆ ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.