Home ಜಿಲ್ಲೆ ಗ್ರಾಮೀಣ ಮಹಿಳೆಯರು ಸಾಹಿತ್ಯದ ಸಾಧಕರು : ಭಾರತಿ ಪಾಟೀಲ

ಗ್ರಾಮೀಣ ಮಹಿಳೆಯರು ಸಾಹಿತ್ಯದ ಸಾಧಕರು : ಭಾರತಿ ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ, ೧೫: ವಚನ ಸಾಹಿತ್ಯವನ್ನು ಬೋಧನೆ ಮತ್ತು ಅಧ್ಯಯನಕ್ಕೆ ಮಾತ್ರ ಸೀಮಿತಗೊಳಿಸದೇ ಅದರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ. ರಾಜ್ಯಮಟ್ಟದ ಕೋ. ಚನ್ನಬಸಪ್ಪ ದತ್ತಿ ಪ್ರಶಸ್ತಿಗೆ ಈ ಬಾರಿ ರೂಪಾ ರಜಪೂತ ಆಯ್ಕೆಯಾಗಿದ್ದಾರೆ. ಗ್ರಾಮೀಣ ಮಹಿಳೆಯರೂ ಸಹ ಇಂದು ಸಾಹಿತ್ಯದ ಸಾಧಕರಾಗಿ ಹೊರಹೊಮ್ಮಿದ್ದು ನಾವೆಲ್ಲ ಹೆಮ್ಮೆಪಡುವ ಸಂಗತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಅಧ್ಯಕ್ಷೆ ಭಾರತಿ ಪಾಟೀಲ ಅಭಿಪ್ರಾಯಪಟ್ಟರು.
ರವಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಕೋ. ಚನ್ನಬಸಪ್ಪ ದತ್ತಿ, ಸುಶೀಲಾಬಾಯಿ ಮತ್ತು ದಿ. ಬೋಜಪ್ಪ ದೇಸಾಯಿ ಸ್ಮರಣಾರ್ಥ ದತ್ತಿ, ದಿ. ಮಲ್ಲೇಶಪ್ಪ ಅಶೋಕಕುಮಾರ ಗಂಜ್ಯಾಳ ದತ್ತಿ, ಲಿಂ. ಷಡಕ್ಷರಯ್ಯ ಶಿವಪೂಜಯ್ಯ ದತ್ತಿ ಹೀಗೆ ವಿವಿಧ ದತ್ತಿಗೋಷ್ಠಿ ಹಾಗೂ ರಾಜ್ಯಮಟ್ಟದ ದತ್ತಿ ಪ್ರಶಸ್ತಿಗೆ ಚಾಲನೆ ನೀಡಿ ಮಾತನಾಡಿದರು.
ವಚನ ಸಾಹಿತ್ಯ ಇಂದು ವಿಶ್ವಮಾನ್ಯ ಸಾಹಿತ್ಯವಾಗಿ ಹೊರಹೊಮ್ಮುವ ಮೂಲಕ ಶರಣರು ನಡೆ-ನುಡಿ ಒಂದಾಗಿಸಿದ್ದಾರೆ ಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ಆರ್.ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ರವಿಶಂಕರ ಎಂ. ಹೂಗಾರ ಮಾತನಾಡಿ, ಯುವಜನರ ಮನಸ್ಸಿನಲ್ಲಿ ಶರಣರ ತತ್ವಗಳನ್ನು ಬಿತ್ತುವಲ್ಲಿ ಇದೊಂದು ಮೌಲಿಕವಾದ ಕಾರ್ಯಕ್ರಮ. ಇಂತಹ ಅನೇಕ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ನಾಡಿಗೆ ನೀಡುವ ಮೂಲಕ ಜಿಲ್ಲಾ ಕಸಾಪ ಅತ್ತ್ಯುತ್ತಮ ಕಾರ್ಯ ಮಾಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು. “ವಚನ ಸಾಹಿತ್ಯದ ಅತ್ಯಗತ್ಯ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಮಾತನಾಡಿ, ಮಾನವೀಯ ಮೌಲ್ಯಗಳು
ಹಾಗೂ ನೈತಿಕ ತಳಹದಿಯ ಮೇಲೆ ರೂಪಗೊಂಡ ವಚನ ಸಾಹಿತ್ಯ ಇಂದು
ನಮ್ಮೆಲ್ಲರ ಬದುಕಿಗೆ ಆಧಾರಸ್ಥಂಭವಾಗಿದ್ದು, ಆರೋಗ್ಯಕರ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಒಳಗೊಂಡಿರುವ ಬದುಕನ್ನು ಕಟ್ಟಿಕೊಳ್ಳಲು ಹಾಗೂ ಆಡಳಿತಗಾರನಾಗಿರಲು ವಚನ ಸಾಹಿತ್ಯದ ಅಧ್ಯಯನ ಹಾಗೂ ಅದರ ಪಾಲನೆಯು ಇಂದು ತುಂಬಾ ಅಗತ್ಯವಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ.ಬಂದೇನವಾಜ ಅವಟಿ ಮಾತನಾಡಿ, ಜಿಲ್ಲಾ ಕಸಾಪ ನಾಡು ನುಡಿ, ನೆಲ-ಜಲ ಭಾಷೆಯ ಉಳಿವಿನ ನಿಟ್ಟಿನಲ್ಲಿ ಹಲವಾರು ಉದಯೋನ್ಮುಖ ಕವಿಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ವೇದಿಕೆಯಲ್ಲಿ ರಮೇಶ ಬೋಜಪ್ಪ ದೇಸಾಯಿ, ವಿಜಯಲಕ್ಷ್ಮಿ ಹಳಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸುನಂದಾ ಕೋರಿ ಪ್ರಾರ್ಥಿಸಿದರು. ಪರವೀನಬಾನು ಶೇಖ ಸ್ವಾಗತಿಸಿ ಗೌರವಿಸಿದರು. ರಿಯಾಜ ಪಿಂಜಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಶಿಲ್ಪಾ ಭಸ್ಮೆ ನಿರೂಪಿಸಿದರು. ಸುಖದೇವಿ ಅಲಬಾಳಮಠ ವಂದಿಸಿದರು. ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ಮಹಿಳಾ ಸಾಹಿತಿಗಳಿಗೆ ನೀಡುವ ೨೦೨೬ನೇ ಸಾಲಿನ ಕೋ.ಚನ್ನಬಸಪ್ಪ ರಾಜ್ಯ ದತ್ತಿ ಪ್ರಶಸ್ತಿಯನ್ನು ಈ ಬಾರಿ ಇಂಡಿ ತಾಲೂಕಿನ ಅಗಸನಾಳ ಗ್ರಾಮದ ರೂಪಾ ರಜಪೂತ ಅವರಿಗೆ ನೀಡಿ ಪುರಸ್ಕರಿಸಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ
ರೂಪಾ ರಜಪೂತ ಭಾವನಾತ್ಮಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಜಿ. ಎಸ್ ಬಳ್ಳೂರ, ಶ್ರೀಕಾಂತ ನಾಡಗೌಡ, ಕೆ. ಎಸ್. ಹಣಮಾಣಿ, ಟಿ. ಆರ್. ಹಾವಿನಾಳ, ರುದ್ರಮ್ಮ ಗಿಡ್ಡಪ್ಪಗೋಳ, ಶ್ರೀಕಾಂತ ನಾಡಗೌಡ, ಬಸನಗೌಡ ಬಿರಾದಾರ, ಶಾಂತಾ ವಿಭೂತಿ, ಭಾಗೀರಥಿ ಸಿಂಧೆ, ಲತಾ ವಾಲೀಕಾರ, ಗಂಗಮ್ಮ ರೆಡ್ಡಿ, ಬಾಬು ಲಮಾಣಿ, ಬಸವರಾಜ ಕೋನರೆಡ್ಡಿ, ಫಖ್ರುದ್ದೀನ ಅಲಿಅಹ್ಮದ ಹಿರೇಕೊಪ್ಪ, ಮಹಾದೇವಿ ತೆಲಗಿ, ಯಲಗೂರಪ್ಪ ಬೂದಿಹಾಳ, ಎಸ್. ಕೆ. ಪಾಟೀಲ,
ಆರ್. ಎಂ.ದೊಡಮನಿ ಮುಂತಾದವರು ಉಪಸ್ಥಿತರಿದ್ದರು.