
ಬೆಂಗಳೂರು,ನ.೧೨-ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ನಗರದ ಹಲವು ರಸ್ತೆಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ನಗರ ಸಂಚಾರ ಪೊಲೀಸರು ತಾತ್ಕಾಲಿಕವಾಗಿ ಸಂಚಾರ ಮಾರ್ಪಾಡು ಮಾಡಿದ್ದಾರೆ.
ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ ನಿಂದ ಡೇರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ಎಲ್ಲಾ ವಾಹನಗಳ ಸಂಚಾರವನ್ನು ಮೈಕೋ ಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್ ಪಾಸ್ ಬಳಿ ಕಾರ್ಯಕ್ರಮ ನಡೆಯುವ ವೇಳೆಯಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
ಬನ್ನೇರುಘಟ್ಟ ರಸ್ತೆಯಲ್ಲಿ ಆನೇಪಾಳ್ಯ ಜಂಕ್ಷನ್ ಕಡೆಯಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಸಾಗುವ ವಾಹನಗಳು ಮೈಕೋಬಂಡೆ ಜಂಕ್ಷನ್ ಬಲತಿರುವು ಪಡೆದು ನ್ಯೂ ಮೈಕೋ ರಸ್ತೆ ಮೂಲಕ ಆಡುಗೋಡಿ ಜಂಕ್ಷನ್ಗೆ ಬಂದು ಬಲ ತಿರುವು ಪಡೆದು ಹೊಸೂರು ಲಷ್ಕರ್ ಮುಖ್ಯರಸ್ತೆಯಲ್ಲಿ ಸಾಗುವುದು. ಇನ್ನೂ ಕೆಲವು ವಾಹನಗಳು ಬಿ.ಜಿ ರಸ್ತೆಯ ಮುಖಾಂತರ ಸಾಗಿ ಡೇರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಸಾಗಿ ಡೇರಿ ಸರ್ಕಲ್ ಜಂಕ್ಷನ್ನಲ್ಲಿ ಎಡ ತಿರುವು ಪಡೆದು ಡಾ. ಮರಿಗೌಡ ರಸ್ತೆಯ ಮುಖಾಂತರ ಮಡಿವಾಳ ಚೆಕ್ಪೋಸ್ಟ್ ಮತ್ತು ಹೊಸೂರು ರಸ್ತೆಗೆ ತಲುಪಿ ಮುಂದೆ ಸಾಗುವುದು.
ಜಯನಗರದಲ್ಲಿ ನಿರ್ಬಂಧ:
ಜಯನಗರ ಸಂಚಾರ ಪೊಲೀಸ್ ಠಾಣಾ ಸರಹದ್ಧಿನ ಮಾರೇನ ಹಳ್ಳಿ ಮುಖ್ಯ ರಸ್ತೆಯ ೨೮ನೇ ಮುಖ್ಯ ರಸ್ತೆ, ಕಡೆಯಿಂದ ಜಯದೇವ ಹಾಸ್ಪಿಟಲ್ ಜಂಕ್ಷನ್ ಕಡೆಗೆ ಸಂಚಾರವನ್ನು ಗಣ್ಯರ ಸಂಚಾರ ವೇಳೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈಸ್ಟ್ ಎಂಡ್ ಮುಖ್ಯ ರಸ್ತೆಯ ಈಸ್ಟ್ ಎಂಡ್ ಜಂಕ್ಷನ್ ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ಮಾನ್ಯರು ಸಂಚರಿಸುವ ವೇಳೆ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
೨೮ನೇ ಮುಖ್ಯ ರಸ್ತೆಯಲ್ಲಿ ನಿರ್ಬಂಧಿಸಿರುವುದರಿಂದ ಬನಶಂಕರಿ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸುವ ವಾಹನ ಸವಾರರು ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆ, ಮೂಲಕ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸುವುದು (ವಿವಿಐಪಿಗಳ ಸಂಚಾರವಿರುವ ಸಮಯವನ್ನು ಹೊರತು ಪಡಿಸಿ) ಈಸ್ಟ್ ಎಂಡ್ ಜಂಕ್ಷನ್ ಕಡೆಯಿಂದ ಸ್ವಾಗತ್ ಜಂಕ್ಷನ್ ಕಡೆಗೆ ಸಂಚರಿಸುವ ವಾಹನ ಸವಾರರು, ೨೮ನೇ ಮುಖ್ಯ ರಸ್ತೆ ಮೂಲಕ ಹಾಗೂ ಈಸ್ಟ್ ಎಂಡ್ ರಸ್ತೆ ಮೂಲಕ ಬಲ ಮತ್ತು ಎಡ ತಿರುವು ಪಡೆದುಕೊಂಡು ಸ್ವಾಗತ್ ರಸ್ತೆ, ಕಡೆಗೆ ಹಾಗೂ ಜೆಪಿ ನಗರ ಡಾಲ್ಮೀಯ ಜಂಕ್ಷನ್ ಕಡೆಗೆ ಸಂಚರಿಸ ಬಹುದಾಗಿರುತ್ತದೆ.
ಜೆ.ಪಿ.ನಗರದಲ್ಲಿ ನಿರ್ಬಂಧ:
ಜೆ.ಪಿ. ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊರವರ್ತುಲ ರಸ್ತೆಯ ೧೫ನೇ ಕ್ರಾಸ್, ೨೪ನೇ ಮುಖ್ಯರಸ್ತೆಯ ಜಂಕ್ಷನ್ ನಿಂದ ಬನ್ನೇರಘಟ್ಟ ರಸ್ತೆಯ ಜೆ.ಡಿ.ಮರ ಜಂಕ್ಷನ್ ವರೆಗೆ, ಆರ್.ವಿ ಡೆಂಟಲ್ ಜಂಕ್ಷನ್ ನಿಂದ ಬನ್ನೇರಘಟ್ಟ ಮುಖ್ಯ ರಸ್ತೆಯ ವರೆಗೆ (೯ನೇ ಅಡ್ಡ ರಸ್ತೆ), ಬಿ.ಪಿ.ಎಲ್ ಅರಕೆರೆ ಮುಖ್ಯ ರಸ್ತೆ, ಬನ್ನೇರಘಟ್ಟ ಮುಖ್ಯರಸ್ತೆವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
೧೫ನೇ ಕ್ರಾಸ್ ನಿಂದ ಜೆ.ಡಿ ಮರದವರೆಗೂ ನಿರ್ಬಂಧಿಸಿದ್ದು, ಹೊಸೂರು ರಸ್ತೆಯ ಕಡೆಗೆ ಹೋಗುವ ವಾಹನ ಸವಾರರು ಕನಕಪುರ ಮುಖ್ಯರಸ್ತೆ, ಬನಶಂಕರಿ ಬಸ್ ನಿಲ್ದಾಣದ ಮೂಲಕ ೪೬ನೇ ಅಡ್ಡ ರಸ್ತೆಯ ಮೂಲಕ ಸಂಚರಿಸುವುದು.
ತಲಘಟ್ಟಪುರದಲ್ಲಿ ನಿರ್ಬಂಧ:
ತಲಘಟ್ಟಪುರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಅಂಜನಾಪುರ ೮೦ ಅಡಿ ರಸ್ತೆಯಿಂದ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ವಿವಿಐಪಿಗಳ ಸಂಚಾರದ ವೇಳೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಗೊಟ್ಟಿಗೆರ ಕೆರೆ ಹತ್ತಿರ ಮತ್ತು ಕರ್ನಾಟಕ ಬ್ಯಾಂಕ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ, ಲೊಯೋಲಾ ಶಾಲೆಯ ಮುಂಭಾಗದ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ:
ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಬರುವ ವಾಹನಗಳು ಅಂಜನಾಪುರ ೮೦ ಅಡಿರಸ್ತೆ, ಬಿಎಂಟಿಸಿ ಡಿಪೋ ತುಳಸಿಪುರ ಅಗ್ನಿಶಾಮಕ ಠಾಣೆ ಬಳಿ ಮಾರ್ಗವಾಗಿ ಲಾಲ್ ಬಹದ್ದೂರ್ ಶಾಸ್ತ್ರಿ,ನಗರ, ನಾರಾಯಣನಗರ ಜೋಡಿ ರಸ್ತೆ ಮೂಲಕ ಕನಕಪುರ ರಸ್ತೆ, ಎ೨ಬಿ ಜಂಕ್ಷನ್ ಮೂಲಕ ಸಂಚರಿಸಬಹುದಾಗಿದೆ. ಗೊಟ್ಟಿಗೆರೆ ಕಡೆಯಿಂದ ಬರುವ ವಾಹನಗಳು ಬಿಕೆ ಸರ್ಕಲ್, ಜಂಬುಸವಾರಿದಿಷ್ಟೆ ಭೈರಪ್ಪ ಸರ್ಕಲ್ ಮೂಲಕ ಗ್ಯಾಸ್ ಫ್ಯಾಕ್ಟರಿ, ಹರಿನಗರ ಕ್ರಾಸ್ ಕೋಣನಕುಂಟೆ ಕ್ರಾಸ್ ಮೂಲಕ ಕನಕಪುರ ರಸ್ತೆಯಲ್ಲಿ ಸಂಚರಿಸಬಹುದಾಗಿದೆ. ಲೊಯೋಲಾ ಶಾಲೆಯ ರಸ್ತೆ, ವಾಹನಗಳು ಬಿಕೆ ಸರ್ಕಲ್, ಬ್ರಿಗೇಡ್ ಮಿಲೇನಿಯಂ ಸಿಗ್ನಲ್ ಜೆಪಿನಗರ ಪುಟ್ಟೇನಹಳ್ಳಿ ಕೆರೆ ಮೂಲಕ ಹೋಗಬಹುದಾಗಿದೆ.
ಹುಳಿಮಾವು ಬಳಿ ನಿರ್ಬಂಧ:
ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅರಕೆರೆ ಬಿಳೇಕಹಳ್ಳಿ, ಮೈಕೋ ಲೇಔಟ್, ಡೇರಿ ಸರ್ಕಲ್ ಹಾಗೂ ನಗರದ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.























