
ಕಲಬುರಗಿ,ಜೂ.16-ತಾಲ್ಲೂಕಿನ ಅವರಾದ (ಬಿ) ಗ್ರಾಮದಲ್ಲಿರುವ ಹೋಟೆಲ್ ಎದರುಗಡೆ ಇರುವ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆಯ ಪಿಐ ಸಂತೋಷ ಎಲ್.ಟಿ., ಸಿಬ್ಬಂದಿಗಳಾದ ಪುಂಡಲೀಕ, ವಿಠ್ಠಲ, ಮಂಜುನಾಥ ಹಾಗೂ ಫಿರೋಜ್ ಅವರು ದಾಳಿ ನಡೆಸಿ 6 ಜನರನ್ನು ಬಂಧಿಸಿದ್ದಾರೆ.
ಕಿರಣ್ ಮಾಲಿಪಾಟೀಲ, ಚಿದಂಬರಾಯ ಪೂಜಾರಿ, ಸೂರ್ಯಕಾಂತ ಹಿಂಚಗೇರಿ, ದಶರಥ ಕಾಂಬಳೆ, ಓಂಕಾರ ಹೊಸಮನಿ ಮತ್ತು ಶಿವಕುಮಾರ ಜಮಾದಾರ ಎಂಬುವವರನ್ನು ಬಂಧಿಸಿ 5790 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.