Home ಜಿಲ್ಲೆ ಚಳಕಾಪುರ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ

ಚಳಕಾಪುರ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ

ಭಾಲ್ಕಿ,ನ.12 : ತಾಲ್ಲೂಕಿನ ಚಳಕಾಪೂರ ಗ್ರಾಮದಲ್ಲಿ ಹನುಮಾನ ದೇವರ ಜಾತ್ರಾಮಹೋತ್ಸವ ನಿಮಿತ್ತ ಆಯೋಜಿಸಿದ್ದ ಧ್ವಜಾರೋಹಣವನ್ನು ಸಂಸದ ಸಾಗರ್ ಖಂಡ್ರೆ ನೆರವೇರಿಸಿದರು. ಪಲ್ಲಕ್ಕಿ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿಸಂಚರಿಸಿ ಪುನಃ ದೇವಸ್ಥಾನಕ್ಕೆ ತಲುಪಿತು. ಆನೆ ಪಲ್ಲಕ್ಕಿ ಮೆರವಣಿಗೆಯ ಪ್ರಮುಖಆಕರ್ಷಣೆಯಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರ,ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಪಲ್ಲಕ್ಕಿಮೆರವಣಿಗೆಯಲ್ಲಿ ಸಡಗರದಿಂದ ಪಾಲ್ಗೊಂಡು ಹನುಮಾನ ದೇವರ ಕೃಪೆಗೆ
ಪಾತ್ರರಾದರು.
ಇದಕ್ಕೂ ಮುನ್ನ ಜರುಗಿದ ವಿಶೇಷ ಪೂಜಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಸದ ಸಾಗರ್ ಖಂಡ್ರೆ, ವಿಧಾನಪರಿಷತ್ ಸದಸ್ಯ ಮಾರುತಿರಾವ್ ಮೂಳೆ ಪಾಲ್ಗೊಂಡಿದ್ದರು.