
ಭಾಲಿ,್ಕ ನ 12 ತಾಲೂಕಿನ ಬೀರಿ(ಬಿ) ಗ್ರಾಮದ ರೈತರಾದ ನರಸಿಂಗ ಬಿರಾದಾರ ಹಾಗೂ ರಾಜಕುಮಾರ ಬಿರಾದಾರ ಅವರ ಹೊಲದಲ್ಲಿ ಬೆಳೆದ ಕಬ್ಬು ಶಾರ್ಟ್ಸಕ್ರ್ಯುಟ್ನಿಂದ ಬುಧವಾರ ಮಧ್ಯಾಹ್ನಸಂಪೂರ್ಣ ಸುಟ್ಟು ಭಸ್ಮವಾಗಿದೆ.
ರೈತ ನರಸಿಂಗ ಬಿರಾದಾರ ಅವರ ಸ.ನಂ.223ರಲ್ಲಿ ಬೆಳೆದ 2.5 ಎಕರೆ ಕಟಾವಿಗೆ ಬಂದ ಕಬ್ಬು ವಿದ್ಯುತ್ ಶಾರ್ಟ್ಸಕ್ರ್ಯುಟ್ನಿಂದ ಬೆಂಕಿಗಾಹುತಿಯಾಗಿದೆ.ಬೆಂಕಿ ಕಬ್ಬಿಗೆ ತಗುಲಿದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದಾಗ ಅಗ್ನಿಶಾಮಕ ಠಾಣೆಯ ಸಿಬ್ಬಂದಿಯವರು ಎರಡು ವಾಹನಗಳಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಆದರೂ ಕಬ್ಬು ಸಂಪೂರ್ಣ ಸುಟ್ಟು ಹೋಯಿತು.
ಬೀರಿ(ಬಿ) ಗ್ರಾಮದ ರಾಜಕುಮಾರ ಬಿರಾದಾರ ಅವರ ಸ.ನಂ:224 ಜಮೀನಿನಲ್ಲಿ ಬೆಳೆದ 1 ಎಕರೆ ಕಬ್ಬು ಸುಟ್ಟು ಭಸ್ಮವಾಗಿದೆ.
ಸಾಲ ಮಾಡಿ ವರ್ಷವಿಡಿ ಬೆವರು ಸುರಿಸಿ ಕಬ್ಬಿಗೆ ಗೊಬ್ಬರು ಹಾಕಿ, ನೀರುಣಿಸಿ ಬೆಳೆಸಿದ ಕಬ್ಬು ನಮ್ಮಕಣ್ಣೇದೆರು ಬೆಂಕಿಗಾಹುತಿಯಾಗಿದನ್ನು ಕಂಡು ರೈತರಿಬ್ಬರೂ ಕಣ್ಣೀರು ಸುರಿಸಿ,ದು:ಖ ವ್ಯಕ್ತಡಿಸಿದರು.ಸರ್ಕಾರ ಈಗಲಾದರೂ ನಮ್ಮ ನೆರವಿಗೆ ಬರಲಿ ಎಂದು ಮನವಿ ಮಾಡಿದರು.





















