Home ಜಿಲ್ಲೆ ಮಹೇಶನಗರ ಬಡಾವಣೆಯ ನಾಗರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ನಿವಾಸಿಗಳ ಒತ್ತಾಯ

ಮಹೇಶನಗರ ಬಡಾವಣೆಯ ನಾಗರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ನಿವಾಸಿಗಳ ಒತ್ತಾಯ

ಬೀದರ: ಜೂ.೨:ಮಹಾನಗರ ಪಾಲಿಕೆಯ ವಾರ್ಡ್ ನಂ. ೨೭ರ ಮಹೇಶನಗರ ಬಡಾವಣೆಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಸ್ಥಳೀಯ ನಿವಾಸಿಗಳು ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮನ್ನಳಿ ರಸ್ತೆಯಿಂದ ಅಕ್ಕಮಹಾದೇವಿ ವೃದ್ಧಾಶ್ರಮ, ಹನುಮಾನ ಮಂದಿರ, ಬಸವರಾಜ ಜಕ್ಕಾ ಅವರ ಮನೆಯಿಂದ ಕುಮಾರಸ್ವಾಮಿ ಹಿರೇಮಠ ಅವರ ಮನೆವರೆಗೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಪೂರ್ಣವಾಗಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಗ್ರಹಿಸಲಾಗಿದೆ.
ಬಡಾವಣೆಯಲ್ಲಿರುವ ಲೇಬರ್ ಅಡ್ಡದಿಂದ ಸಾರ್ವಜನಿಕರ ಸಂಚಾರ ಮತ್ತು ಸ್ವಚ್ಛತೆಗೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವ ಅಥವಾ ತೆರವುಗೊಳಿಸುವಂತೆ ನಿವಾಸಿಗಳು ಕೋರಿದ್ದಾರೆ.
ಇದಲ್ಲದೆ, ಹನುಮಾನ ಮಂದಿರದ ಎದುರುಗಡೆ ಕಳೆದ ಆರು ತಿಂಗಳುಗಳಿAದ ೨೪್ಠ೭ ನೀರು ಸರಬರಾಜು ಪೈಪ್ ಒಡೆದು ನಿರಂತರವಾಗಿ ನೀರು ಸೋರಿಕೆಯಾಗುತ್ತಿದ್ದು, ಅಮೂಲ್ಯ ಕುಡಿಯುವ ನೀರು ವ್ಯರ್ಥವಾಗುತ್ತಿರುವುದರ ಜೊತೆಗೆ ರಸ್ತೆ ಹಾನಿಗೊಳಗಾಗಿದೆ. ಆದ್ದರಿಂದ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಮಹೇಶನಗರ ನಿವಾಸಿಗಳ ಪರವಾಗಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಿ, ಸ್ಥಳ ಪರಿಶೀಲನೆ ನಡೆಸಿ ಎಲ್ಲಾ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಪರಿಹರಿಸಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ. ಈ ಸಂಧರ್ಭದಲ್ಲಿ ಮಹಾನಗರ ಪಾಲಿಕೆ ಸದ್ಯಸರಾದ ಶಶಿಧರ ಹೊಸಳ್ಳಿ, ಮಹಾನಗರ ಪಾಲಿಕೆ ಸದ್ಯಸರಾದ ರಾಜರಾಮ ಚಿಟ್ಟಾ, ಮಹಾನಗರ ಪಾಲಿಕೆ ಸದ್ಯಸರಾದ ಶಿವಕುಮಾರ ಭಾವಿಕಟ್ಟಿ, ಪ್ರೋ. ಕುಮಾರ ಸ್ವಾಮಿ, ರೆವಣ್ಣಪ್ಪಾ ಮೂಲಗೆ, ಬಸವರಾಜ ಜಕ್ಕಾ, ಇಂಧುರ ಚೆಟ್ಟಿ, ಯೋಗೆಶ ಯದಾಪೂರೆ, ಸೊಮನಾಥ ಸಜ್ಜಶೆಟ್ಟಿ, ಮಹೇಶ ಹೀರೆಮಠ, ಪ್ರವೀಣ ಯಾದವ, ಶಾಂತಕುಮಾರ ಪಾಟೀಲ, ಮಲ್ಲಿಕಾರ್ಜುನ ಮಡಿವಾಳ, ಜಗನಾಥ ಖೇಳಗೆ, ಸಿ.ಎನ್. ರಘುನಾಥ ಮತ್ತು ವೈಷ್ಣವಿ ಓಉಔ ಅಧ್ಯಕ್ಷರಾದ ಸಂಗಮೇಶ ನೇಳಗೆ ಇನ್ನಿತರು ಹಾಜರಿದ್ದರು.