
ಚನ್ನಮ್ಮನ ಕಿತ್ತೂರು,ಆ೧೧: ಕಿತ್ತೂರ ಚನ್ನಮ್ಮನ ಐತಿಹಾಸಿಕ ಇತಿಹಾಸ ಕುರಿತು ಸಂಶೋಧನೆ ನಡೆಯಬೇಕು ಮತ್ತೇ ಗತವೈಭವ ಮರುಕಳಿಸಬೇಕು. ೧೨ನೇ ಶತಮಾನದಲ್ಲಿ ಬಸವಣ್ಣವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಂತೆ ರಾಣಿ ಚನ್ನಮ್ಮಳನ್ನು ಕರ್ನಾಟಕದ ಶೌರ್ಯದ ಪ್ರತೀಕ ಎಂದು ಸರ್ಕಾರ ಘೋಷಿಸಲಿ. ಇತಿಹಾಸ ಪುನರುಜೀವನಗೊಳಿಸಿ ಇಂದಿನ ಯುಪಿಳಿಗೆಗೆ ತಿಳಿಸುವಂತಾಗಬೇಕು ಎಂದು ಸಾಹಿತಿ ಡಾ. ಸರ್ಜು ಕಾಟಕರ ಹೇಳಿದರು.
ಸ್ಥಳೀಯ ತಾಲೂಕಾಡಳಿತ ಕಿತ್ತೂರ ಪ್ರಾಧಿಕಾರ ಕಛೇರಿ ಸಭಾಭವನದಲ್ಲಿ ಕಿತ್ತೂರು ಚನ್ನಮ್ಮ ಅಭಿವೃದ್ದಿ ಕುರಿತು ಆಯೋಜಿಸಿದ್ದ ತಜ್ಞರ ಸಭೆಯಲ್ಲಿ ಮಾತನಾಡಿದರು. ಚನ್ನಮ್ಮಳಗಿಂತ ಪೂರ್ವದಲ್ಲಿ ಛತ್ರಪತಿ ಶಿವಾಜಿ, ಹೈದರಲಿ, ಟಿಪ್ಪುಸುಲ್ತಾನ್ ಅಂತವರ ಭಾವಚಿತ್ರಗಳು ನೋಡಲು ದೊರೆಯುತ್ತವೆ. ಆದರೆ ಚನ್ನಮ್ಮನ ಭಾವಚಿತ್ರಗಳು ಸಿಗುವುದಿಲ್ಲ. ಇದು ಏಕೆ? ಈ ಕೂಡಲೇ ಸರ್ಕಾರ ತಜ್ಞರ ಸಮಿತಿ ರಚಿಸಿ ನೈಜ ಚಿತ್ರ ಹುಡುಕಲು ಮುಂದಾಗಬೇಕು. ಭಾರತ ಅಲ್ಲಲ್ಲಿ ಮಾತ್ರ ಚನ್ನಮ್ಮನ ಪ್ರಚಾರವಿದೆ. ಉತ್ತರ ಭಾಗದಲ್ಲಿ ಇವಳ ಪ್ರಚಾರವಿಲ್ಲ ಅದಕ್ಕಾಗಿ ಭಾರತೀಯ ಎಲ್ಲ ಭಾಷೆಗಳ ಪುಸ್ತಕಗಳಲ್ಲಿ ಕಿತ್ತೂರಿನ ಇತಿಹಾಸ ಕುರಿತು ಪಠ್ಯ ಪುಸ್ತಕಗಳಲ್ಲಿ ತರುವಂತೆ ಕ್ರಮಕೈಗೊಳ್ಳಬೇಕು ಚನ್ನಮ್ಮನ ಕುರಿತಂತೆ ಸಾಕಷ್ಟು ಇತಿಹಾಸವಿದೆ ಅದನ್ನು ಬೆಳಕಿಗೆ ತರುವ ಕೆಲಸವಾಗಬೇಕೆಂದರು.
ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಸಸಿಗೆ ನೀರುನಿಸಿ ಉದ್ಘಾಟಿಸಿ ಮಾತನಾಡಿ ರಾಣಿ ಚನ್ನಮ್ಮಳನ್ನು ಜಗತ್ತಿಗೆ ಗುರಿತಿಸುವಂತೆ ಮಾಡಬೇಕು. ಅವರ ಇತಿಹಾಸ ಮುಂದಿನ ಪಿಳಿಗೆಗೆ ತಿಳಿದುಕೊಂಡು ಉಳಿಸಿ-ಬೆಳೆಸಿ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ನಾವೆಲ್ಲರೂ ಸಲಹೆಗಳನ್ನು ನೀಡಬೇಕೆಂದರು
ತಜ್ಞ ಸಿ.ಕೆ ನಾವಲಗಿ ಸೇರಿ ಅನೇಕ ತಜ್ಞರು ಮಾತನಾಡಿ ರಾಣಿ ಚನ್ನಮ್ಮಾಜೀ ಕರ್ನಾಟಕದ ಶೌರ್ಯದ ಪ್ರತೀಕವೆಂದು ಸರ್ಕಾರ ಘೋಷಿಸಬೇಕು. ಹೋರಾಟಗಾರರ ವಂಶಸ್ಥರ ಹತ್ತಿರವಿರುವ ಅಂದಿನ ದಾಖಲೆ ಹಾಗೂ ಐತಿಹಾಸಿಕ ಸಾಮಗ್ರಿಗಳ ಸಂಗ್ರಹಣೆ ವಿಶ್ಲೇಷಣೆ ಮಾಡಿ ಅವುಗಳನ್ನು ಉಳಿಸಿಕೊಳ್ಳಬೇಕೆಂದು ಅನೇಕ ಸಲಹೆಗಳನ್ನು ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ದೇಶದ ಪ್ರಥಮ ಸ್ವಾತಂತ್ರö್ಯ ಹೋರಾmಗಾರ್ತಿ ರಾಣಿಚನ್ನಮ್ಮ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆದು ಪ್ರಯತ್ನಿಸಲಾಗುವುದು. ಸ್ಮಾರಕಗಳ ಪ್ರತಿರೂಪ ನಿರ್ಮಿಸುವುದರಿಂದ ಹಳೆಯ ಸ್ಮಾರಕಗಳು ಮಹತ್ವ ಕಳೆದುಕೊಳ್ಳಿತ್ತಿವೆ ಈ ನಿಟ್ಟಿನಲ್ಲಿ ಐತಿಹಾಸಿಕ ಕುರುಹು ಹಾಗೂ ಸ್ಮಾರಕಗಳನ್ನು ಉಳಿಸಿಕೊಂಡು ಅಭಿವೃದ್ದಿಪಡಿಸಬೇಕಾಗಿದೆ. ಈಗಾಗಲೇ ಕೋಟೆ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳು ಚಾಲ್ತಿಯಲ್ಲಿವೆ. ಪ್ರವಾಸಿಗರನ್ನು ಆಕರ್ಷಿಸಿಸಲು ನಕ್ಷೆ ತಯಾರಿಯಲ್ಲಿದ್ದು ಹೊಸ ತಂತ್ರಜ್ಞಾನ ಬಳಿಸಿ ನಿಮ್ಮೇಲ್ಲರ ಸಲಹೆ ಸೂಚನೆ ಪಡೆದುಕೊಂಡು ಮುಂದಿನ ರೂಪರೇಷೆ ಕೈಗೊಳ್ಳಲಾಗುವುದೆಂದರು.
ಕಿತ್ತೂರ ಅಭಿವೃದ್ದಿ ಪ್ರಾಧಿಕಾರ ಆಯುಕ್ತ ಸಂತೋಷ ಹಾನಗಲ್ ಮಾತನಾಡಿ ಇತಿಹಾಸ ತಜ್ಞರು ನೀಡಿರುವ ವಿಷಯಗಳನ್ನು ಸೇರಿಸಿಕೊಂಡು ಕಿತ್ತೂರು ಪರಂಪರೆ ಮತ್ತು ಐತಿಹಾಸಿಕ ತಾಣಗಳನ್ನು ಸಮಗ್ರ ಅಭಿವೃದ್ದಿಗಾಗಿ ನೀಲಿ ನಕ್ಷೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗುವುದೆಂದರು.
ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿ ಕಿತ್ತೂರು ಚನ್ನಮ್ಮನ ಇತಿಹಾಸ ಕುರಿತು ಸಲಹೆ-ಸೂಚನೆ ನೀಡಿ ಮಾತನಾಡಿದರು.
ಸಭೆಯಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ಇತಿಹಾಸ ತಜ್ಞರು-ವಿದ್ವಾಂಸರು ಭಾಗವಹಿಸಿದ್ದರು. ಸಿಪಿಐ ಶಿವಾನಂದ ಗುಡಗನಟ್ಟಿ, ಬಸವರಾಜ ಕುಪ್ಪಸಗೌಡರ ನಿರೂಪಿಸಿ ಸ್ವಾಗತಿಸಿ ವಂದಿಸಿದರು. ಪ್ರಾಧಿಕಾರ ಸಿಬ್ಬಂದಿ ಇತರರಿದ್ದರು.




























