
ನವಲಗುಂದ,ಜು.೧೦: ಮಲಪ್ರಭೆಗೆ ಮಹದಾಯಿ ಕಳಸಾ ಬಂಡೂರಿ ಜೋಡಣೆ ಬಗ್ಗೆ ನ್ಯಾಯಾಧಿಕರಣದ ತೀರ್ಪಿನಂತೆ ಬಾಕಿ ಉಳಿದ ನಮ್ಮ ಪಾಲಿನ ನೀರಿನ ಹಕ್ಕನ್ನು ಕೊಡಿಸಬೇಕು. ಸರ್ಕಾರಿ ವಕೀಲ ಮೋಹನ ಕಾತರಕಿ ಅವರು ಕಳಸಾ ಬಂಡೂರಿಗೆ ಕಾನೂನಿನ ಅಡ್ಡಿಯಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಅವರ ಘೋಷಣೆಯಂತೆ ಶೀಘ್ರ ಕಾಮಗಾರಿ ಆರಂಭಸುವAತೆ ಆಗ್ರಹಿಸಿ ರೈತ ಹೋರಾಟಗಾರರು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೂಲಕ ಕೇಂದ್ರ ಸರ್ಕಾರ ಮಂತ್ರಿಗಳು ಹಾಗೂ ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಅವರು ಪಟ್ಟಣದ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ವೇದಿಕೆಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಿ, ಎತ್ತಿನಹೊಳೆ ಯೋಜನೆ ಅರಣ್ಯ ಪ್ರದೇಶದಲ್ಲಿರುವ ಕ್ಷೇತ್ರಕ್ಕೆ ರಾಜ್ಯ ನೀರಾವರಿ ಮಂತ್ರಿಗಳು ಭೇಟಿಕೊಟ್ಟು ವಿಳಂಬವಾಗಿರುವ ಯೋಜನೆಗೆ ಅರಣ್ಯದಲ್ಲಿನ ಪ್ರಾಣಿ ಪಕ್ಷಿಗಳಿಗೆ ಹಾಗೂ ವನ್ಯ ಜೀವಿಗಳಿಗೆ ತೊಂದರೆಯಾಗದAತೆ ಮುಚ್ಚಿದ ಕಾಲುವೆಗೆ ಷರತ್ತಿಗೊಳಪಟ್ಟು ಕಾಮಗಾರಿ ತಕ್ಷಣವೇ ಆರಂಭಿಸುವAತೆ ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ.
ಅದೇ ಮಾದರಿಯಲ್ಲಿ ಮಲಪ್ರಭಾ ಕಳಸಾ ಬಂಡೂರಿ ಯೋಜನೆ ಟೆಂಡರ ಕರೆದರೂ ಕಾರ್ಯಾರಂಭ ವಾಗಿರುವುದಿಲ್ಲ. ಇದಕ್ಕೆ ಕೇಂದ್ರದ ಪರವಾನಗಿ ಪಡೆದು ಟೆಂಡರ್‌ದಾರರಿಗೆ ಮುಖ್ಯ ಮಂತ್ರಿಗಳು, ನೀರಾವರಿ ಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳು ಚರ್ಚಿಸಿ ಆದಷ್ಟು ಬೇಗನೆಆದೇಶಮಾಡಿಕಾಮಗಾರಿಯನ್ನು ಕಾರ್ಯಾರಂಭಮಾಡಬೇಕು ಎಂದರು.
ತಾಲೂಕಿನಲ್ಲಿ ಸರಿಯಾದಂಥಾ ಮಳೆಯಾಗದೇ ಜಮೀನುಗಳಲ್ಲಿನ ಬೆಳೆಗಳು ಒಣಗಿ ನಾಶವಾಗುತ್ತಿದ್ದು ಮೋಡ ಬಿತ್ತನೆ ಮಾಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು.
ಯಲ್ಲಪ್ಪ ಧಾಡಿಭಾವಿ, ಸುಭಾಸಗೌಡ ಪಾಟೀಲ, ಬಸನಗೌಡ ಫಕೀರಗೌಡ್ರ, ಬಾಂಬೆ ಮೇಸ್ತಿç, ಚಾಹುಸೇನಿ, ಭೀಮಪ್ಪ ಹಿರೇಗಣ್ಣವರ, ಕರಿಯಪ್ಪ ತಳವಾರ, ಯಲ್ಲಪ್ಪ ತಡಸಿ, ಮುರಗೆಪ್ಪ ಪಲ್ಲೇದ, ಗಂಗಪ್ಪ ಹಳ್ಳದ, ಗೋವಿಂದರಡ್ಡಿ ಮೊರಬದ, ರವಿ ತೋಟದ, ಉಳಿವೆಪ್ಪ ಉಳ್ಳಾಗಡ್ಡಿ, ಸಂಗಪ್ಪ ನಿಡವಣಿ ಸೇರಿದಂತೆ ಹಲವರು ಇದ್ದರು































