
ಲಕ್ಷೆ÷್ಮÃಶ್ವರ,ಆ.೧೨: ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ೨೦೨೬-೨೭ ನೇ ಸಾಲಿನ ಬೆಳೆ ಹಾನಿ ಎಂದು ಪ್ರತಿ ಎಕರೆಗೆ ೫೦,೦೦೦ ಘೋಷಿಸಬೇಕು ಮತ್ತು ರಾಷ್ಟಿçÃಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾ ರೈತ ಸಂಘಟನೆ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಅಧ್ಯಕ್ಷ ಶಂಕರಗೌಡ ಜಯನಗೌಡರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ್ ಅವರಿಗೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಲಕ್ಷೆ÷್ಮÃಶ್ವರ ತಾಲೂಕಿನ ರೈತ ಸಂಘದ ಅಧ್ಯಕ್ಷ ನಾಗರಾಜ ಕಳ್ಳಿ ಹಾಳ ಅವರು ಸಹ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಕೂಡಲೇ ಲಕ್ಷೆ÷್ಮÃಶ್ವರ ತಾಲೂಕನ್ನು ಸಹ ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳು ಹೆಸರಿನಲ್ಲಿ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಖಾದರ್ ಭಾಷಾ ರಿ ತ್ತಿ ಲವಪ್ಪ ದಾಸರ ಬಸವರಾಜ ಮೂಲಿಮನಿ ರಂಗಪ್ಪ ಜೋಡಿ ಅಬ್ದುಲ್ ರಜಾಕ್ ವಿರೂಪಾಕ್ಷ ಅರಳಿ ವರುಣ ಕಳಿಹಾಳ ಸೇರಿದಂತೆ ಅನೇಕರಿದ್ದರು.




























