
ಶಿರಹಟ್ಟಿ,ಆ೯: ಬರ ಪರಿಸ್ಥಿತಿ ಅಧ್ಯಯನ ಮಾಡಲು ಶನಿವಾರ ಪಟ್ಟಣಕ್ಕೆ ಬಂದಿದ್ದ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ರಾಯರೆಡ್ಡಿ ಅವರಿಗೆ ಸಮಗ್ರ ರೈತ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ಗದಗ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ ಕೆಲವು ಕಡೆ ಬಿತ್ತನೆಯೂ ಆಗಿಲ್ಲ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿ ಕೂಡಲೇ ಸಂಕಷ್ಟಕ್ಕೀಡಾಗಿರುವ ರೈತರಿಗೆ ಮಧ್ಯಂತರ ಪರಿಹಾರ ಬೆಳೆವಿಮೆ ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಗ್ರ ರೈತ ಸಂಘಟನೆಗಳ ಮುಖಂಡರಾದ ಮಂಜುನಾಥ ಮಾಗಡಿ, ರವಿಕಾಂತ್ ಅಂಗಡಿ, ಚೆನ್ನಪ್ಪ ಷಣ್ಮುಖಿ, ಸೋಮಣ್ಣಾ ದೇಸೂರ, ಚಂದ್ರು ಮಾಗಡಿ, ಪ್ರವೀಣ್ ಹೊಟ್ಟಿ, ವಾಸದೇವ್ ಮಾಂಡ್ರೆ, ತುಕಾರಾಮ ಲಮಾಣಿ ಸೇರಿದಂತೆ ರೈತ ಮುಖಂಡರು ಇದ್ದರು.




























