Home ಜಿಲ್ಲೆ ಪಟ್ಟಾ ವಿತರಿಸಲು ಮನವಿ

ಪಟ್ಟಾ ವಿತರಿಸಲು ಮನವಿ

ಲಕ್ಷೆ÷್ಮÃಶ್ವರ,ಆ೧೧: ಪಟ್ಟಣದ ಪುರಸಭೆಯ ವತಿಯಿಂದ ೧೩ ವರ್ಷಗಳ ಹಿಂದೆಯೇ ಆಶ್ರಯ ಫಲಾನುಭವಿಗಳಿಗೆ ನೀಡಲು ಭೂಮಿ ಖರೀದಿಸಲಾಗಿದೆ ಇದುವರೆಗೂ ಫಲಾನುಭವಿಗಳ ಆಯ್ಕೆಯಾಗಿದ್ದರು ಒಬ್ಬರಿಗು ನಿವೇಶನ ನೀಡಿಲ್ಲ.


ಈ ನಿಟ್ಟಿನಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರಾಗಿರುವ ಶಾಸಕರ ಸಮ್ಮುಖದಲ್ಲಿ ಆಶ್ರಯ ಸಮಿತಿ ಸಭೆ ಕರೆದು ಫಲಾನುಭವಿಗಳಿಗೆ ಪಟ್ಟಾ ವಿತರಿಸಬೇಕು ಎಂದು ಆಶ್ರಯ ಸಮಿತಿ ಸದಸ್ಯರಾದ ತಿಪ್ಪಣ್ಣ ಸಂಶಿ ಮಧು ಹಾದಿಮನಿ ವಿರೂಪಾಕ್ಷ ಆದಿ ಮಜ್ಜಿದಾ ಬೀಗಂ ಕಲ್ಬುರ್ಗಿ ಅವರುಗಳು ಸಹಿ ಮಾಡಿ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.


ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಪರಶುರಾಮ ಗುಡಾದರಿಯವರು ಶಾಸಕರ ಗಮನಕ್ಕೆ ತಂದು ಫಲಾನುಭವಿಗಳಿಗೆ ಪಟ್ಟ ವಿತರಿಸುವ ಕುರಿತು ಕ್ರಮ ಕೈಗೊಳ್ಳುವದಾಗಿ ಹೇಳಿದರು.


ಈ ಸಂದರ್ಭದಲ್ಲಿ ಗಿರೀಶ ಕಲ್ಮಠ ಎಲ್ಲಪ್ಪ ಹಂಜಿ ಶೇಖಪ್ಪ ಹಂಜಿ ಶಶಿಕಲಾ ಬಡಿಗೇರ ಮತ್ತಿತರರು ಇದ್ದರು.