
ವಾಡಿ: ಮೇ.೩:ಪಟ್ಟಣದ ರೈಲು ನಿಲ್ದಾಣದಲ್ಲಿನ ಕಾಮಗಾರಿ ವೀಕ್ಷಿಸಿಲು ಆಗಮಿಸಿದ ಕೇಂದ್ರ ರೈಲ್ವೆ ವಿಭಾಗದ ಮುಖ್ಯ ವ್ಯವಸ್ಥಾಪಕರಾದ ರಾಜೀವ್ ಶ್ರೀವಾತ್ಸವ ಅವರಿಗೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ವಾಡಿ ರೈಲು ನಿಲ್ದಾಣದ ಅಭಿವೃದ್ಧಿ ಬಗ್ಗೆ ಹಾಗೂ ಇಲ್ಲಿನ ಕುಂದುಕೊರತೆಗಳನ್ನು ವಿವರಿಸಿ ಮನವಿ ಪತ್ರ ಸಲ್ಲಿಸಿದರು.
ವಾಡಿ ಪಟ್ಟಣದ ರೈಲು ನಿಲ್ದಾಣದ ಅಭಿವೃದ್ಧಿ ಬಗ್ಗೆ ವಿವರಿಸಿದ ವೀರಣ್ಣ ಯಾರಿ ಇದು ತನ್ನದೆ ಆದ ಇತಿಹಾಸ ಹೊಂದಿದೆ, ಪುರಾತನ ರೈಲ್ವೆ ನಿಲ್ದಾಣದಲ್ಲಿ ಇದು ಒಂದಾಗಿದೆ, ಭಾರತ ರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಲ್ಲಿ ಭೇಟಿ ಕೊಟ್ಟಿದ್ದಾರೆ ಎಂದರು.
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಜಿ ಅವರು
ಅಮೃತ್ ಭಾರತ್ ಸ್ಟೇಷನ್ ಸ್ಕೀಮ್ ನಲ್ಲಿ ಈ ರೈಲ್ವೆ ನಿಲ್ದಾಣದ ಕಾಮಗಾರಿ ಕೈಗೆತ್ತಿಕೊಂಡಿದ್ದು ನಮಗೆ ತುಂಬಾ ಖುಷಿಯಾಗಿದೆ.
ಆದರೆ ಈ ನಿಲ್ದಾಣ ಅನೇಕ ಸಮಸ್ಯೆಗಳ ತಾಣವಾಗಿದೆ, ಕಾಮಗಾರಿ ವಿಳಂಬದ ಜೊತೆಗೆ ಕಳಪೆಯಾಗುತ್ತಿರುವುದು ಬೇಸರ ಮೂಡಿಸಿದೆ ಇದರ ಬಗ್ಗೆ ತಾವು ಹೆಚ್ಚಿನ ಗಮನ ಕೊಡಿ.ಸಮಸ್ಯೆಗಳ ಪಟ್ಟಿ ಯನ್ನು ನೀಡುತ್ತಿದ್ದು,
ಪದೇ ಪದೇ ಅಭಿವೃದ್ಧಿಗಾಗಿ ಸಲಹೆ ಮನವಿ ನೀಡಿದರು ಬರೀ ಬರವಸೆ ಆಗಿ ಉಳಿದಿದೆ ಆದಷ್ಟು ಬೇಗ ಕಾರ್ಯರೂಪಕ್ಕೆ ತನ್ನಿ
ಎಂದು ಹೇಳಿದರು.
ರೈಲು ಸಂಖ್ಯೆ ೧೧೩೧೧ ಸೋಲಾಪುರದಿಂದ ಹಾಸನ ಇರುವುದನ್ನು ಮಂಗಳೂರು ವರೆಗೆ ವಿಸ್ತರಣೆಮಾಡಿ (ದೂರ ೧೫೦ ಕಿಲೋಮೀಟರ್) ಇದು ಸಾಮಾನ್ಯ ಜನರ ಶಿಕ್ಷಣ ಮತ್ತು ಆರ್ಥಿಕ ವ್ಯವಹಾರ ಜೀವನಕ್ಕೆ ಬಹಳ ಪ್ರಯೋಜನಕಾರಿಯಾಗಲಿದೆ.
ಕಳಪೆ ಕಾಮಗಾರಿ ಜೊತೆಗೆ ಅಮೃತ ಭಾರತ ಯೋಜನೆ ಕೆಲಸ ಸ್ಥಗಿತಗೊಂಡಿದೆ. ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾಧ್ಯವಾದಷ್ಟು ಬೇಗ ಅದನ್ನು ಕಾರ್ಯಗತಗೊಳಿಸಿ.
ವಾಡಿ ಕಾರ್ಡ್ ಕ್ಯಾಬ್ ಬಳಿಯ ಬ್ರೀಜ್ ಕೆಲಸವು ವರ್ಷಗಳಿಂದ ನಡೆಯದೆ ಅದು ಅರ್ಧಕ್ಕೆ ನಿಂತಿದೆ, ಇದು ಅನೇಕ ಜನರಿಗೆ ತೊಂದರೆ ನೀಡುತ್ತಿದೆ, ದಯವಿಟ್ಟು ಅದನ್ನು ತಕ್ಷಣ ಪೂರ್ಣಗೊಳಿಸಿ.
ಂಅಅ ಸಿಮೆಂಟ್ ಕಾರ್ಖಾನೆಗೆ ಸಾಗುವ ಎರಡು ರೈಲ್ವೆ ಹಳಿಗಳಿಂದಾಗಿ ಜನರು ಬೇಸಿಗೆ ಮತ್ತು ಮಳೆಗಾಲದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ, ತಕ್ಷಣ ಇಲ್ಲಿ ಒಳ ಸೇತುವೆಯನ್ನು ನಿರ್ಮಿಸಿ. ನಿಲ್ದಾಣಕ್ಕೆ ಪ್ರವೇಶ ದ್ವಾರವನ್ನು ನಿರ್ಮಿಸಿ ಮತ್ತು ನಾಲ್ಕನೇ ಪ್ಲಾಟ್‌ಫಾರ್ಮ್ನಲ್ಲಿ ಕಾಯುವ ಸಭಾಂಗಣ,ಶೌಚಾಲಯ ನಿರ್ಮಿಸಿ.
ವಾಡಿ ಪಟ್ಟಣದ ಸುತ್ತಾ ರೈಲ್ವೆ ಗೇಟ್ ಗಳು ಆವರಿಸಿ ಕೊಂಡಿರುವುದರಿAದ, ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು,ಒಳ ಸುತುವೆ ಅಥವಾ ಮೇಲ ಸೇತುವೆ ನಿರ್ಮಿಸಿ.
ಹನುಮಾನ ನಗರ,ವಿಜಯ ನಗರ, ಸೋಮ್ಲಾ ತಾಂಡಾ ಹಾಗೂ ಇಂದಿರಾ ನಗರಕ್ಕೆ ಹೊಗಬೇಕಾದರೆ ರೈಲ್ವೆ ಹಳಿ ದಾಟಿಯೇ ಹೋಗಬೇಕು,
ಸುಮಾರು ಏಳು ಎಂಟು ಸಾವಿರ ಬಡ ಕುಟುಂಬ ವಾಸಿಸುವ ಬಡಾವಣೆಗಳಿವೆ.
ಇಲ್ಲಿನ ಜನರಿಗೆ ಸುರಕ್ಷಿತವಾಗಿ ಒಳ ಸೇತುವೆ ನಿರ್ಮಾಣ ಅತೀ ಅವಶ್ಯಕವಾಗಿದೆ.
ಕೊಲ್ಲಾಪುರ ರೈಲನ್ನು ವಾಡಿ ಯಿಂದ ಪ್ರಾರಂಭಿಸಿ, ತಲುಪುವಂತೆ ಮಾಡಿ,
ಕಾಚಿಗುಡಾ ಪ್ಯಾಸೆಂಜರ್ ರೈಲು ಕಲಬುರಗಿ ಯಿಂದ ಪ್ರಾರಂಭಿಸಿ,ತಲುಪುವAತೆ ಹಾಗೂ ವಂದೇ ಭಾರತ ರೈಲನ್ನು ವಾಡಿ ನಿಲ್ದಾಣದಲ್ಲಿ ನಿಲ್ಲಿಸು ಸೂಚಿಸಿ ಇದ್ದರಿಂದ ಬಹಳಷ್ಟು ಜನತೆಗೆ ತುಂಬಾ ಅನುಕೂಲ ಆಗುತ್ತದೆ.
ರೈಲ್ವೆ ನಿಲ್ದಾಣದ ಕೊಳಚೆ ನೀರು ವಾರ್ಡ್ ಸಂಖ್ಯೆ ೨೦ರಲ್ಲಿ ಹರಿದು ಹೊಗುತ್ತಿರುವುದರಿಂದ, ಮಳೆಗಾಲದಲ್ಲಿ ಜನರು ಸಂಕಟಕ್ಕೆ ಸಿಲುಕುತ್ತಿದ್ದು ಇದನ್ನು ಪರಿಹರಿಸಿ.
ನಿಲ್ದಾಣದಲ್ಲಿ ಶೌಚಾಲಯ ಮತ್ತು ವೇಟಿಂಗ್ ಹಾಲ ಸಮರ್ಕವಾದ ನಿರ್ವಾಣೆ ಇಲ್ಲದೇ ಇರುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ನಿಲ್ದಾಣದಲ್ಲಿ ಪ್ರಥಮ ಚಿಕಿತ್ಸೆ ಗಾಗಿ ವೈದ್ಯರೊಂದಿಗೆ
ಔಷಧ ಅಂಗಡಿ, ಸ್ವದೇಶಿ ಮಳಿಗೆ ಪ್ರಾರಂಭಕ್ಕೆ ಒತ್ತು ನೀಡಿ.
ಗುಟುಕಾ,ದೊಮ್ರಪಾನ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ.
ಜನರ ಮತ್ತು ಜಾನುವಾರುಗಳ ಸುರಕ್ಷಿತೆಗಾಗಿ ನಿಲ್ದಾಣದ ೩ ಕಿ ಮಿ ಸುತ್ತಲೂ ಬೇಲಿ ಹಾಕಿಸುವುದು.
ನಿಲ್ದಾಣದಲ್ಲಿ ಎಕ್ಸಲೇಟರ್ ಅಳವಡಿಸಿ, ತುರ್ತು ಸಂಧರ್ಭದಲ್ಲಿ ಅಂಬುಲೇನ್ಸ ಸಂಚಾರಿಸುವAತೆ ಮಾಡುವುದು.
ಹಳಿಗಳ ಮಧ್ಯ ಇರುವ ಸಾರ್ವಜನಿಕ ರುಧ್ರಭೂಮಿಗೆ ರಸ್ತೆ ಸಂಪರ್ಕ ಕಲ್ಪಸುವುದು.ವಾಡಿ ಯಿಂದ ಬಿದರ,ಬಿದರ ಯಿಂದ ವಾಡಿ ಯವರೆಗೆ,ದೌಂಡ್ ದಿಂದ ವಾಡಿಯವರೆಗೆ,ವಾಡಿ ಯಿಂದ ದೌಂಡ ವರೆಗೆ ರೈಲನ್ನು ವಿಸ್ತರಿಸುವುದು.
ವಾಡಿ ವಿಭಾಗದಿಂದ ತಿಂಗಳಿಗೆ ಕೋಟ್ಯಾಂತರ ರಾಪಾಯಿ ಲಾಭ ಪಡೆಯುವ ಇಲಾಖೆ,ವಾಡಿ ನಿಲ್ದಾಣ ಅಭಿವೃದ್ಧಿ ಮಾಡದೆ,ಇಲ್ಲಿನ ಜನರಿಗೆ ಅನುಕೂಲ ಕೂಡಾ ಮಾಡದಿರುವುದು ದುರದೃಷ್ಟಕರವಾಗಿದೆ
ಇದರ ಬಗ್ಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೂ ಮಾಹಿತಿ ನೀಡಿದ್ದು ತಾವು ಮೇಲ್ಕಾಣಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ಪರಿಹರಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಹರನಾಳ, ಕಿಶನ ಜಾಧವ,ರಾಜಶೇಖರ ಧೂಪದ,ಸತೀಶ ಸಾವಳಗಿ,ಕುಮಾರ ಜಾಧವ,ನಿರ್ಮಲ ಇಂಡಿ,ಉಮಾಭಾಯಿ ಗೌಳಿ,ಆನಂದ ಸಂಗಶೆಟ್ಟಿ
ಸೇರಿದAತೆ ಇತರರು ಇದ್ದರು.





















