
ಕಲಬುರಗಿ, ಆ. 18: ಕರುಣೇಶ್ವರ ನಗರದ ಶ್ರೀ ಜೈ ಹನುಮಾನ್ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ-2026ರ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.
ಶ್ರೀ ಜೈ ವೀರ ಹನುಮಾನ್ ಮಂದಿರದಲ್ಲಿ 30 ಆಗಸ್ಟ್ ರಂದು ನಡೆಯಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪಾರಾಯಣ, ಪೂಜೆ, ಭಜನೆ, ಪಂಡಿತ್ ಅಭಯಾಚಾರ್ಯ ಅವರಿಂದ ಪ್ರವಚನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಶ್ರೀ ಜೈ ಹನುಮಾನ್ ಮಂದಿರದ ಅಧ್ಯಕ್ಷ ಅವಿನಾಶ್ ಕುಲಕರ್ಣಿ ಕಾರ್ಯದರ್ಶಿ ವಿಶ್ವಾಸ್ ರ್ಮೋಘೇಕರ ಪದಾಧಿಕಾರಿ ವಿನುತಕುಮಾರ್ ಜೋಶಿ, ವಿನೋದ ಸಾತಖೇಡ, ಕೃಷ್ಣ ಸುರಪುರ, ಅರ್ಚಕ ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕ ಚಂದ್ರಕಾಂತ್ ಕಡಗಂಚಿ, ಪಾರಾಯಣ ಸಂಘದ ಸದಸ್ಯರು, ಭಕ್ತರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಭಕ್ತಿಭಾವದ ವಾತಾವರಣದಲ್ಲಿ ನೆರವೇರಿತು.































