
ಅಥಣಿ : ಮತಕ್ಷೇತ್ರದ ಶಾಸಕರಾಗಿದ್ದ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಲಕ್ಷ್ಮಣ ಸವದಿ ಅವರಿಂದ ತೆಲೆಗೆ ಬಿಳಿ ಅರಿಕೆ ಕಟ್ಟಿ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಸಿಗುವವರೆಗೆ ಅದನ್ನು ತೆಗೆಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಹರಕೆ ಹೊತ್ತಿದ್ದ ಪಟ್ಟಣದ ಉದ್ಯಮಿ ಹಾಗೂ ಲಕ್ಷ್ಮಣ ಸವದಿ ಅಭಿಮಾನಿ ರಾಮನಗೌಡ ಪಾಟೀಲ ಅವರು ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ಸಿಕ್ಕ ಮೇಲೆ ತಮ್ಮ ಹರಕೆಯನ್ನು ತೀರಿಸಿದ್ದಾರೆ.
ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆಯುವವರೆಗೂ ತಲೆಗೆ ಕಟ್ಟಿರುವ ಅರಿವೆಯನ್ನು ಬಿಚ್ಚುವುದಿಲ್ಲ ಎಂದು ರಾಮನಗೌಡ ಪಾಟೀಲ ಅವರು ಹರಕೆ ಹೊತ್ತಿದ್ದರು. ಇದೀಗ ಜುಲೈ 3, 2026ರಂದು ಮುಖ್ಯಮಂತ್ರಿ ಅವರ ಸಚಿವ ಸಂಪುಟದಲ್ಲಿ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಶನಿವಾರ ರಾಮನಗೌಡ ಪಾಟೀಲ ಹಾಗೂ ಅವರ ಪತ್ನಿ ತಮ್ಮ ನಿವಾಸದಿಂದ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿಗಳ ಗದ್ದುಗೆ ಇರುವ ಗಚ್ಚಿನ ಮಠದವರಿಗೆ
ಉರುಳು ಸೇವೆ ಹಾಗೂ ದೀರ್ಘ ದಂಡ ನಮಸ್ಕಾರ ಸಲ್ಲಿಸಿ ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ಹರಕೆ ಹೊತ್ತ ರಾಮನಗೌಡ ಪಾಟೀಲ ಮಾತನಾಡಿ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರ ಸೇರಿದಂತೆ ರಾಜ್ಯಾದ್ಯಂತ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬುದು ನಮ್ಮ ಬಹುದಿನಗಳ ಆಶಯವಾಗಿತ್ತು. ಆ ಆಶಯ ಈಡೇರಿದರೆ ಗಚ್ಚಿನ ಮಠದವರಿಗೆ ಉರುಳು ಸೇವೆ ಸಲ್ಲಿಸಿ ಹರಕೆ ತೀರಿಸುವುದಾಗಿ ಸಂಕಲ್ಪ ಮಾಡಿದ್ದೆ. ಇದೀಗ ನಮ್ಮ ನಾಯಕರಿಗೆ ಸಚಿವ ಸ್ಥಾನ ದೊರೆತಿರುವುದು ಸಂತಸ ತಂದಿದೆ. ನಮ್ಮ ಸಂಕಲ್ಪದಂತೆ ಇಂದು ದಂಪತಿ ಸಮೇತ ಉರುಳು ಸೇವೆ ಹಾಗೂ ದೀರ್ಘ ದಂಡ ನಮಸ್ಕಾರ ಸಲ್ಲಿಸಿ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ,” ಎಂದು ಹೇಳಿದರು.
ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಅಥಣಿ ಕ್ಷೇತ್ರದ ಜನರಲ್ಲಿ ಸಂತಸ ಮೂಡಿಸಿದೆ. ಅವರ ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯುವ ವಿಶ್ವಾಸವಿದೆ ಎಂದು ರಾಮನಗೌಡ ಪಾಟೀಲ ಹೇಳಿದರು.




























