Home ಜಿಲ್ಲೆ ಯಾದಗಿರಿಗೆ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ

ಯಾದಗಿರಿಗೆ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ

ಯಾದಗಿರಿ: ರಾಷ್ಟ್ರೀಯ ಏಕತೆ, ಕೋಮು ಸಾಮರಸ್ಯ, ಜಾತ್ಯತೀತತೆ ಹಾಗೂ ಶಾಂತಿಯ ಸಂದೇಶ ಸಾರುವ ರಾಜೀವಗಾಂಧಿ ಜ್ಯೋತಿ ಸದ್ಭಾವನಾ ಯಾತ್ರೆ ಯಾದಗಿರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿ ಬಳಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾತ್ರೆಯನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಆ.೯ರಂದು ತಮಿಳುನಾಡಿನ ಶ್ರೀಪೆರಂಬುದೂರಿನಿAದ ಸದ್ಭಾವನಾ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಸುಮಾರು ೩,೦೦೦ ಕಿ.ಮೀ. ದೂರವನ್ನು ೧೨ ದಿನಗಳಲ್ಲಿ ಕ್ರಮಿಸಿ ಎಂಟು ರಾಜ್ಯಗಳ ಮೂಲಕ ಯಾತ್ರೆ ಸಾಗಲಿದೆ. ಆ.೧೯ರಂದು ರಾಷ್ಟ್ರ ರಾಜಧಾನಿ ನವದೆಹಲಿಯನ್ನು ತಲುಪಲಿದೆ ಎಂದು ತಿಳಿಸಿದರು.

ತಮಿಳುನಾಡಿನಿಂದ ಆರಂಭಗೊAಡಿರುವ ಯಾತ್ರೆ ಕರ್ನಾಟಕದ ಬೆಂಗಳೂರು, ಚಿತ್ರದುರ್ಗ, ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಸೇರಿದಂತೆ ಪ್ರಮುಖ ನಗರಗಳ ಮೂಲಕ ಸಾಗುತ್ತಿದೆ. ರಾಷ್ಟ್ರೀಯ ಏಕತೆ, ಕೋಮು ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶವನ್ನು ಜನರಿಗೆ ತಲುಪಿಸುವುದು ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದರು.

ಭಾರತವು ಭಾಷೆ, ಧರ್ಮ ಹಾಗೂ ಪ್ರಾದೇಶಿಕ ವೈವಿಧ್ಯತೆಯಿಂದ ಕೂಡಿದ ದೇಶ. ಇಂತಹ ವೈವಿಧ್ಯತೆಯ ನಡುವೆಯೂ ದೇಶದ ಏಕತೆ ಮತ್ತು ಅಖಂಡತೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ. ಕಳೆದ ೩೫ ವರ್ಷಗಳಿಂದ ಸದ್ಭಾವನೆಯ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಿಕೊಂಡು ಬರುತ್ತಿರುವ ಈ ಯಾತ್ರೆ, ಭಾರತೀಯರು ಒಗ್ಗಟ್ಟಾಗಿ ನಿಂತಾಗ ದೇಶ ಇನ್ನಷ್ಟು ಬಲಿಷ್ಠವಾಗುತ್ತದೆ ಎಂಬ ಸಂದೇಶವನ್ನು ಸಾರುತ್ತಿದೆ ಎಂದು ಹೇಳಿದರು.

‘ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದ ಮನೋಭಾವವೇ ದೇಶದ ಬಲ. ಜಾತಿ, ಧರ್ಮ, ಭಾಷೆ ಹಾಗೂ ಪ್ರದೇಶದ ಭೇದಗಳನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು’ ಎಂದು ಶಾಸಕ ತುನ್ನೂರು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಖಜಾಂಚಿ ಚಿದಾನಂದಪ್ಪ ಕಾಳಬೆಳಗುಂದಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶ್ರೇಣಿಕಕುಮಾರ ಧೋಕಾ, ಮುಖಂಡರಾದ ಮರೆಪ್ಪ ಬಿಳ್ಹಾರ, ಬಸವರಾಜ ಬಾಗ್ಲಿ, ಸ್ಯಾಂಶನ್ ಮಾಳಿಕೇರಿ, ಪರಶುರಾಮ ಚವ್ಹಾಣ, ಮಲ್ಲಿಕಾರ್ಜುನ ಈಟೆ, ಲಕ್ಷ್ಮಾರೆಡ್ಡಿ, ಬಾಷುಮಿಯಾ, ಹೊನ್ನೇಶ ದೊಡ್ಮನಿ, ಲಕ್ಷ್ಮಣ ರಾಠೋಡ, ತಿಮ್ಮಣ್ಣ ನಾಯ್ಕಲ್, ನಾಗನಗೌಡ ಹಳಿಗೇರಾ, ಮಲ್ಲಮ್ಮ ಕೋಮಾರ, ಪದ್ಮಾವತಿ, ರಾಜಾ ಮೈನೊದ್ದೀನ್, ಮೈನೊದ್ದೀನ್ ಮಿಸ್ಟ್ರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.