
ಜೇವರಗಿ,ಜೂ 10: ಬೀಳವಾರ ಗ್ರಾಮದಲ್ಲಿ ಶಾಲಾ ಮಕ್ಕಳು ಕುಡಿಯುವ ನೀರಿನ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.
ಆದ್ದರಿಂದ ಅಲ್ಲಿನ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶ್ರೀ ಸಿದ್ದರಾಮೆಶ್ವರ ಗ್ರಾಮಿಣ ಅಭಿವೃದ್ಧಿ ಸೇವಾ ಸಂಘದ ಉಪಾಧ್ಯಕ್ಷ ಪರಶುರಾಮ್ ದಂಡಗುಲ್ಕರ ಬೀಳವಾರ ಅಗ್ರಹಿಸಿದ್ದಾರೆ. ಸುಮಾರು ದಿನಗಳಿಂದ ಬೋರವೇಲ್ ರಿಪೇರಿ ಮಾಡಿಲ್ಲ. ಆದ್ದರಿಂದ ಶಾಲಾ ಮಕ್ಕಳಿಗೆ ಮತ್ತು ಗ್ರಾಮದ ಜನತೆಗೆ ನೀರಿಲ್ಲ. ಕೂಡಲೇ ಬೋರವೆಲ್ ರಿಪೇರಿ ಮಾಡಬೇಕು. ಜನರಿಗೆ ನೀರು ಕೊಡಬೇಕು. ಒಂದು ವೇಳೆ ನೀರು ಕೊಡದಿದ್ದರೆ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ .


























