
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.29 : ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ದ ಸೋತ ನಂತರ ಸದಾಕಾಲ ಅವರನ್ನು ವಿರೋಧ ಮಾಡ್ತಿದ್ದ ಮಾಜಿ ಸಚಿವ ಶ್ರೀರಾಮುಲು ಈಗ
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅನುಕಂಪದ ಮತ್ತು ಬೆಂಬಲದ ಮಾತುಗಳನ್ನಾಡಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮಯಲು. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಿ ಅವಮಾನ ಮಾಡಲಾಗಿದೆ.
ಎಂಟು ವರ್ಷ ಮುಖ್ಯ ಮಂತ್ರಿಗಳಾಗಿ ಕೆಲಸ ಮಾಡಿದ್ದಾರೆ. 2023ರಲ್ಲಿ ಸಿಎಂ ಅದ ದಿನದಿಂದ ಸಿದ್ದರಾಮಯ್ಯ ಅವರನ್ನು ನೆಮ್ಮದಿಯಾಗಿ ಇರಲು ಕಾಂಗ್ರೆಸ್ ಪಕ್ಷ ಬಿಡಲಿಲ್ಲ. ಅವರಿಗೆ ನಿತ್ಯ ಕಿರಿಕಿರಿ ಮಾಡಿದ್ರು. ಕೊನೆಗೆ ನಿನ್ನೆ ಕ್ಲೈ ಮ್ಯಾಕ್ಸ್ ಹಂತದಲ್ಲಿ ರಾಜೀನಾಮೆ ಕೊಡಿಸಿದ್ರು. ಆಗ ಅವರ ಮುಖದಲ್ಲಿ ನೋವಿತ್ತು. ಅದನ್ನು ನೋಡಿ ನನಗೂ ನೋವಾಗಿದೆ
ಹಿಂದಳಿದ ನಾಯಕನಿಗೆ ನೋವು ತರುವ ಕೆಲಸ ಕಾಂಗ್ರೆಸ್ ಹೈಕಮೆಂಡ್ ಮಾಡಿದೆಂದರು.
ಕಳೆದ ಮೂರು ವರ್ಷ ಒಂದು ಕಡೆ ಡಿಕೆಶಿ ಕಾಲು ಎಳೆದ್ರು. ಮತ್ತೊಂದು ಕಡೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಲು ಎಳೆದ್ರು ಸಿಎಂ ಕುರ್ಚಿಯನ್ನು ಎಳೆದಾಡಿ ಸಿದ್ದರಾಮಯ್ಯ ಅವರಿಂದ ಕಸಿದುಕೊಂಡರು. ಡಿಕೆಶಿ ಈ ಪ್ರಯತ್ನದಲ್ಲಿ ಯಶಸ್ಸುಯಾದ್ರು ಎಂದರು.
ರಾಜ್ಯದಲ್ಲಿ ದೊಡ್ಡ ಮಟ್ಟದ ಬೆಂಬಲಿಗರನ್ನು ಹೊಂದಿರೋ ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ಅಹಿಂದ ವರ್ಗಕ್ಕೆ ನೋವಾಗಿದೆ..
ರಾಹುಲ್ ಗಾಂಧಿಯವರು ಪದೇ ಪದೇ ಒಬಿಸಿ ನಾಯಕರು ಎಂದು ಹೇಳ್ತಾರೆ. ಓಬಿಸಿ ನಾಯಕರನ್ನು ಬೆಂಬಲಿಸಬೇಕು ಎನ್ನುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್ ನಲ್ಲಿ ಎಷ್ಟು ಜನರು ಓಬಿಸಿ ಇದ್ದೀರಾ ಎಂದು ಪ್ರಶ್ನೆ ಮಾಡ್ತಾರೆ. ಆದ್ರೇ ಇದೀಗ ಹಿಂದುಳಿದ ನಾಯಕನಾದ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಾರೆ. ಓಬಿಸಿ ಎಂದು ಬಾಯಿ ಬಡೆದುಕೊಂಡ ರಾಹುಲ್ ಗಾಂಧಿ ಈಗ ಏನು ಹೇಳ್ತಾರೆಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ರಾಜ್ಯದಿಂದ ತೊಲಗಬೇಕು ಎಂದು ಜನರು ಬಯಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಪೋಟೋ ಹಾಕಿಕೊಂಡು ಹಲವು ನಾಯಕರ ಗೆದ್ದಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ಕನಿಷ್ಠ ನೋವು ನಮ್ಮ ಜಿಲ್ಲೆಯ ಶಾಸಕರ ಬಳಿ ಇಲ್ಲ. ನಗುತ್ತಾ ನಗುತ್ತಾ ಡಿಕೆಶಿಗೆ ಹೂಗುಚ್ಚ ಕೊಡ್ತಾರೆಂದರು.
ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ನಿಮ್ಮ ಪಕ್ಷ ಹೀಗೆ ಮಾಡಿತ್ತಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ. ಇನ್ನೊಬ್ಬ ನಾಯಕನ ಸೃಷ್ಟಿಗಾಗಿ ಯಡಿಯೂರಪ್ಪ ರಾಜೀನಾಮೆ ನೀಡಿದ್ರು. ಆದರೆ ಸಿದ್ದರಾಮಯ್ಯ ವಿಚಾರದಲ್ಲಿ ಕುರ್ಚಿ ಕಸಿದು ಕೊಂಡ್ರು. ಐದು ವರ್ಷಗಳ ಅಧಿಕಾರ ಕೊಟ್ಟಿದ್ದಾರೆ ಅವರೇ ಸಿಎಂ ಅಗಬೇಕಿತ್ತು. ಈ ವಿಷಯದಲ್ಲಿ ಮುಂದೆ ಕಾಂಗ್ರೆಸ್ ಪಶ್ಚಾತ್ತಾಪ ಪಡುತ್ತದೆಂದರು.
ಈಗ ಸಿದ್ದರಾಮಯ್ಯ ಬಗ್ಗೆ ಸಾಫ್ಟ್ ಕಾರ್ನರ್ ಮಾತುಗಳ ಬಗ್ಗೆ ಕೇಳಿದಾಗ. ರಾಜಕೀಯವಾಗಿ ಸಿದ್ದರಾಮಯ್ಯ ಅವರನ್ನು ವಿರೋಧಿಸಿದ್ದೇನೆ ಹೊರೆತು ವಯಕ್ತಿಕವಾಗಿ ಅಲ್ಲ. ಸಂಬಂಧ ಬೇರೆ ರಾಜಕೀಯವೇ ಬೇರೆ.
ಸಿದ್ದರಾಮಯ್ಯ. ಸಿಎಂ ಆಗಬೇಕು ಎಂದು ಕುರುಬರು ಸೇರಿದಂತೆ ಎಲ್ಲ ಜನಾಂಗದವರು ಮತ ಹಾಕಿದ್ರು..
ಬಿಜೆಪಿ ರಾಜ್ಯಧ್ಯಾಕ್ಷ ವಿಚಾರ ವಿಜೇಂದ್ರ ಅವರೇ ಬಹುತೇಕ ಮುಂದುವರೆಯುತ್ತಾರೆ.
ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಕುರುಬ ಸಮುದಾಯ ನನಗೂ ಮತ್ತು ಸುರೇಶ್ ಬಾಬು ಸೋಲಲು ಕಾರಣವಾಯ್ತು. ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಬಗ್ಗೆ ಗೊತ್ತಿದೆ. ರಾಜಕೀಯವಾಗಿ ವಿರೋಧ ಮಾಡ್ತಾನೆ ಆದ್ರೇ ಅವರ ನೋವಾಗೋ ರೀತಿಯಲ್ಲಿ ನಡೆದು ಕೊಂಡಿರೋದು ಸತ್ಯ ಎಂದರು.























